ಬೆಂಗಳೂರು.14.ಸೆಪ್ಟೆಂಬರ್.26: ಉನ್ನತ ಶಿಕ್ಷಣ ಇಲಾಖೆಯು 2025-26 ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದ 452 ಅತಿಥಿ ಉಪನ್ಯಾಸಕರ(ಪಿಎಚ್‌ಡಿ) ವಿದ್ಯಾರ್ಹತೆಯ ಸತ್ಯಾಸತ್ಯತೆ ಪರಿಶೀಲಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ಯುಜಿಸಿ ನಿಯಮಾವಳಿಗಳಂತೆ ನಿಗದಿತ ಅರ್ಹತೆ ಹೊಂದಿದ್ದಾರೆಯೇ ಎಂಬುದರ ಕುರಿತು ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಇಲಾಖೆಯು ಈ ಉಪನ್ಯಾಸಕರಿಗೆ ನೋಟಿಸ್ ನೀಡಲಾಗಿದೆ.
ಆನ್‌ಲೈನ್ ಅರ್ಜಿ ಪರಿಶೀಲನೆ ವೇಳೆ ಬಯಲಾಯ್ತು ರಹಸ್ಯ
2025-26ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯುವಾಗ ಈ ಅಭ್ಯರ್ಥಿಗಳು ತಮಗೆ ಪಿಎಚ್‌ಡಿ ವಿದ್ಯಾರ್ಹತೆ ಇರುವುದಾಗಿ ಅರ್ಜಿಯಲ್ಲಿ ನಮೂದಿಸಿ ಹುದ್ದೆ ಗಿಟ್ಟಿಸಿಕೊಂಡಿದ್ದರು. ಆದರೆ, ಪ್ರಸ್ತುತ 2026-27ನೇ ಸಾಲಿನ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಪರಿಶೀಲನೆ ನಡೆಸಿದಾಗ, ಅದೇ ಅಭ್ಯರ್ಥಿಗಳು ತಮ್ಮ ಪಿಎಚ್‌ಡಿ ಅರ್ಹತೆಯನ್ನು ಕ್ಲೇಮ್ ಮಾಡದೇ ಇರುವುದು ಬೆಳಕಿಗೆ ಬಂದಿದೆ.
ಈ ತೀವ್ರ ವ್ಯತ್ಯಾಸದಿಂದಾಗಿ ಇಲಾಖೆಗೆ ಅನುಮಾನ ಮೂಡಿದ್ದು, ದಾಖಲೆಗಳ ತಪಾಸಣೆಗೆ ಆದೇಶಿಸಿದೆ.
ಉತ್ತರ ಕರ್ನಾಟಕದ ಭಾಗದವರೇ ಹೆಚ್ಚು
ನೋಟಿಸ್‌ಗೆ ಒಳಗಾಗಿರುವ 452 ಅತಿಥಿ ಉಪನ್ಯಾಸಕರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕ ಭಾಗದವರಾಗಿದ್ದಾರೆ. ಮುಖ್ಯವಾಗಿ ಕಲಬುರಗಿ, ಅಥಣಿ, ಜಮಖಂಡಿ, ಸೇಡಂ, ಯಾದಗಿರಿ, ಬೀದರ್, ಹುಬ್ಬಳ್ಳಿ ಹಾಗೂ ರಾಯಚೂರು ಮೂಲದವರೇ ಹೆಚ್ಚಾಗಿದ್ದಾರೆ. ಇದರ ಹೊರತಾಗಿ ಬೆಂಗಳೂರು ಪೂರ್ವ, ವಿಜಯನಗರ ಹಾಗೂ ಯಲಹಂಕ ಭಾಗದ ಕಾಲೇಜುಗಳ ಉಪನ್ಯಾಸಕರಿಗೂ ನೋಟಿಸ್ ಜಾರಿಯಾಗಿದೆ.
ದಾಖಲೆ ಸಲ್ಲಿಸಲು 7 ದಿನಗಳ ಗಡುವು
ಸಂಬಂಧಪಟ್ಟ ಪ್ರಾಂಶುಪಾಲರು ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಆಯಾ ಉಪನ್ಯಾಸಕರಿಂದ ಲಿಖಿತ ಹೇಳಿಕೆ ಹಾಗೂ ಸೂಕ್ತ ದಾಖಲೆಗಳನ್ನು ಪಡೆದು ಇಲಾಖೆಗೆ ಸಲ್ಲಿಸಬೇಕಾಗಿದೆ.





Any questions related to 2025-26ರಲ್ಲಿ ಕಾರ್ಯನಿರ್ವಹಿಸಿದ್ ಅತಿಥಿ ಉಪನ್ಯಕರಿಗೆ ನೋಟಿಸ್!?