Home » ಲೈವ್ ನ್ಯೂಸ್ » ನ.7 ರಂದು ಮಾನವ ಹಕ್ಕುಗಳ ಆಯೋಗದ ಸದಸ್ಯರ ಪರಿಷ್ಕೃತ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ನ.7 ರಂದು ಮಾನವ ಹಕ್ಕುಗಳ ಆಯೋಗದ ಸದಸ್ಯರ ಪರಿಷ್ಕೃತ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ.06.ನವೆಂಬರ್.25: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಗೌರವಾನ್ವಿತ ಸದಸ್ಯರಾದ ನ್ಯಾ. ಎಸ್.ಕೆ.ವಂಟಿಗೋಡಿ ಅವರು ನವೆಂಬರ್ 7 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ನ.7 ರಂದು ಮಾನವ ಹಕ್ಕುಗಳ ಆಯೋಗದ ಸದಸ್ಯರ ಪರಿಷ್ಕೃತ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಅವರು ನವೆಂಬರ್ 7 ರಂದು ಬೆಳಿಗ್ಗೆ 10.30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ನಗರದ ಸರ್ಕಾರಿ ಪ್ರವಾಸಿ ಮಂದಿರಕ್ಕೆ ತೆರಳುವರು. ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 12.30 ಗಂಟೆಯವರೆಗೆ ಮಾನವ ಹಕ್ಕುಗಳ ಆಯೋಗದಲ್ಲಿ ದಾಖಲಾದ ಪ್ರಕರಣ ಸಂಖ್ಯೆ: 3095/10/24/2025(ಎಫ್‌ಬಿ) ಗೆ ಸಂಬoಧಿಸಿದoತೆ ಕೊಪ್ಪಳ ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡುವರು. ಮತ್ತು ತಹಶೀಲ್ದಾರ ಹಾಗೂ ಸಂಬAಧಿಸಿದ ಅಧಿಕಾರಿಗಳೊಂದಿಗೆ ಪ್ರಕರಣದ ಬಗ್ಗೆ ಸಭೆ ನಡೆಸುವರು.

ಮಧ್ಯಾಹ್ನ 12.30 ಕ್ಕೆ ಕೊಪ್ಪಳದಿಂದ ನಿರ್ಗಮಿಸಿ 1.30 ಕ್ಕೆ ಗಂಗಾವತಿಗೆ ತೆರಳುವರು. ಗಂಗಾವತಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನದ ಊಟದ ನಂತರ ಮಾನವ ಹಕ್ಕುಗಳ ಆಯೋಗದಲ್ಲಿ ದಾಖಲಾದ ಸ್ವಯಂ ಪ್ರೇರಿತ ದೂರು ಸಂಖ್ಯೆ: 3950/10/24/2024(ಎಫ್‌ಬಿ) ಗೆ ಸಂಬAಧಿಸಿದAತೆ ಗಂಗಾವತಿ ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಮತ್ತು ತಹಶೀಲ್ದಾರ ಹಾಗೂ ಸಂಬoಧಿಸಿದ ಅಧಿಕಾರಿಗಳೊಂದಿಗೆ ಪ್ರಕರಣದ ಬಗ್ಗೆ ಸಭೆ ನಡೆಸುವರು.

ಅಂದು ಸಂಜೆ 6 ಗಂಟೆಗೆ ಗಂಗಾವತಿಯಿAದ ನಿರ್ಗಮಿಸಿ 7.30 ಕ್ಕೆ ವಿಜಯನಗರದ ವೈಕುಂಠ ಅತಿಥಿಗೃಹಕ್ಕೆ ತೆರಳಿ ವಾಸ್ತವ್ಯ ಮಾಡುವರು ಎಂದು ಗೌರವಾನ್ವಿತ ಸದಸ್ಯರ ಆಪ್ತ ಸಹಾಯಕರಾದ ರೂಪಾ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.7 ರಂದು ಮಾನವ ಹಕ್ಕುಗಳ ಆಯೋಗದ ಸದಸ್ಯರ ಪರಿಷ್ಕೃತ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

Author

ಪ್ರಮುಖ ಸುದ್ದಿ

Stock market

Astrology