Home » ಲೈವ್ ನ್ಯೂಸ್ » PSI ನೇಮಕಾತಿ ಹಗರಣದಲ್ಲಿ ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಅಮಾನತ್ತು.ರಾಜ್ಯ ಸರ್ಕಾರ ಆದೇಶ

PSI ನೇಮಕಾತಿ ಹಗರಣದಲ್ಲಿ ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಅಮಾನತ್ತು.ರಾಜ್ಯ ಸರ್ಕಾರ ಆದೇಶ

ಬೆಂಗಳೂರು.17.ಜೂನ್.25:- ರಾಜ್ಯ ಸರ್ಕಾರದಿಂದ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಕರ್ತವ್ಯಲೋಪವೆಸಗಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಅಮಾನತನ್ನು ಸರ್ಕಾರ ತೆರವುಗೊಳಿಸಿ ಆದೇಶಿಸಿದೆ.

ಈ ಸಂಬಂಧ ಡೈರೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಪರವಾಗಿ ಡಿಐಜಿಪಿ(ಆಡಳಿತದ ಕಾರ್ತಿಕ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಅದರಲ್ಲಿ ಕೆಎಸ್ ಪಿ (ಡಿಪಿ) ನಿಯಮಗಳು 1965/89ರ ನಿಯಮ-5ರನ್ವಯ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸೇವೆಯಿಂದ ಅಮಾನತ್ತಿನಲ್ಲಿರಿಸಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆರವುಗೊಳಿಸಿರುವುದಾಗಿ ಹೇಳಿದ್ದಾರೆ.

ಇನ್ನೂ ಅಮಾನತುಗೊಂಡಿದ್ದಂತ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಸಶಸ್ತ್ರ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಸಹಾಯಕ ಕಮಾಂಡೆಂಟ್ ವೈಜ್ಯನಾಥ್ ಕಲ್ಯಾಣಿ ರೇವೂರ ಹಾಗೂ ಪಿಐ ಆನಂದ ಮೇತ್ರಿ ಎಂಬುವರನ್ನು ಕಾರ್ಯಕಾರ್ಯೇತರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ.

ಅಂದಹಾಗೇ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರನ್ನು ಬೆಂಗಳೂರಿನ ಐಎಸ್ ಡಿಗೆ ಸ್ಥಳ ನಿಯುಕ್ತಿಗೊಳಿಸಿದ್ದರೇ, ಶಾಂತಕುಮಾರ್ ಅವರನ್ನು ಹಾಸನದ ಪಿಟಿಎಸ್ ಗೆ, ವೈಜ್ಯನಾಥ್ ಕಲ್ಯಾಣಿ ರೇವೂರ ಅವರನ್ನು ಮಂಗಳೂರಿನ ಕೆ ಎಸ್ ಆರ್ ಪಿ ಯ 7ನೇ ಪಡೆಗೆ ಹಾಗೂ ಪಿಐ ಆನಂದ ಮೇತ್ರಿ ಅವರನ್ನು ಮಂಗಳೂರಿನ ಎಫ್ ಪಿ ಬಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.8

Author

ಪ್ರಮುಖ ಸುದ್ದಿ

Stock market

Astrology