Home » ಲೈವ್ ನ್ಯೂಸ್ » ಗೃಹರಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗೃಹರಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಬೀದರ.13.ಮೇ.25:- ಜಿಲ್ಲೆಯ ತಾಲ್ಲೂಕು ಘಟಕ ಮತ್ತು ಉಪ ಘಟಕಗಳಲ್ಲಿ ಹಾಲಿ ಖಾಲಿ ಇರುವ ದೀರ್ಘ ಕಾಲದಿಂದ ಗೈರು ಹಾಜರಾಗಿರುವ ಮತ್ತು ನಿಷ್ರಿö್ಕಯಗೊಳಿಸಿರುವ ಗೃಹರಕ್ಷಕರ ಸ್ಥಾನದಲ್ಲಿ ಹೊಸ ಗೃಹರಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಬೀದರ ಗೃಹ ರಕ್ಷಕ ದಳದ ಸಮಾದೇಷ್ಠರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಾಲಿಯಿರುವ ಘಟಕವಾರು ಸಂಖ್ಯೆಬಲ ವಿವರ: ಬೀದರ (2), ಧನ್ನೂರ (3), ಔರಾದ (1), ಕಮಲನಗರ (8), ಹುಲಸೂರ (13), ಮಂಠಾಳ (4) ಒಟ್ಟು 31 ಹುದ್ದೆಗಳು.

ವಿದ್ಯಾರ್ಹತೆ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ವಯೋಮಿತಿ 20 ರಿಂದ 40 ವರ್ಷದೊಳಗಿರಬೇಕು. ವೈದ್ಯರಿಂದ ಶಾರೀರಿಕ ಸುಸ್ಥಿತಿಯ ಬಗ್ಗೆ ಶಾರೀರಿಕ ಅರ್ಹತಾ ಪ್ರಮಾಣ ಪತ್ರ, ಸ್ಥಳಿಯ ನಿವಾಸದ ಪ್ರಮಾಣ ಪತ್ರ. ಹಾಗೂ ಪೋಲಿಸ ಇಲಾಖೆಯಿಂದ ನೀಡಲಾದ ಗುಣ ನಡತೆ ಪ್ರಮಾಣ ಪತ್ರದ ದಾಖಲಾತಿಗಳು ಲಗತ್ತಿಸಬೇಕು.

ಅರ್ಹರು ಆಯಾ ಘಟಕ ಮತ್ತು ಉಪ ಘಟಕದಲ್ಲಿ ಅರ್ಜಿಯನ್ನು ಪಡೆದು ದಿನಾಂಕ: 23-05-2025 ರೊಳಗಾಗಿ ಆಯಾ ಘಟಕದ ಘಟಕಾಧಿಕಾರಿಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆಂದು ಅವರು ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology