Home » ಲೈವ್ ನ್ಯೂಸ್ » ಗೃಹ ಸಚಿವರ ವಿರುದ್ಧ ಪೋಸ್ಟ ಸಂತೋಷ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

ಗೃಹ ಸಚಿವರ ವಿರುದ್ಧ ಪೋಸ್ಟ ಸಂತೋಷ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಗಳೂರು.09.ಜೂ.26: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಹಾಗೂ ದಲಿತ ಸಮುದಾಯವನ್ನು ಅವಮಾನಿಸಿದ ಆರೋಪದಡಿ ಕೋಡಿಕಲ್ ನಿವಾಸಿ ಸಂತೋಷ್ ಶೆಟ್ಟಿ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 7 ರಂದು ಫೇಸ್‌ಬುಕ್ ಪೇಜ್‌ವೊಂದರಲ್ಲಿ ಹಾಕಿದ್ದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಸಂತೋಷ್ ಶೆಟ್ಟಿ ಸಚಿವರ ಘನತೆಗೆ ಕುಂದು ತರುವಂತೆ ಕಮೆಂಟ್ ಮಾಡಿದ್ದ. ಅಲ್ಲದೆ ಪರಿಶಿಷ್ಟ ಜಾತಿ ಸಮುದಾಯದ ವಿರುದ್ಧ ಜಾತಿ ನಿಂದನಾತ್ಮಕ ಪದ ಬಳಸಿ ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆ ತಂದಿದ್ದ ಆರೋಪಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಘಟಕದ ಅಧ್ಯಕ್ಷ ದಿನೇಶ್ ಮೂಳೂರು ನೀಡಿದ ದೂರಿನನ್ವಯ ಉರ್ವ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆ ಮತ್ತು ಬಿಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Author

ಪ್ರಮುಖ ಸುದ್ದಿ

Stock market

Astrology