Home » ಲೈವ್ ನ್ಯೂಸ್ » ನಕಲಿ ದಾಖಲೆ ಸಲ್ಲಿಸಿದ 22 ಅತಿಥಿ ಉಪನ್ಯಾಸಕರು ಪತ್ತೆ

ನಕಲಿ ದಾಖಲೆ ಸಲ್ಲಿಸಿದ 22 ಅತಿಥಿ ಉಪನ್ಯಾಸಕರು ಪತ್ತೆ

ಬೆಂಗಳೂರು.16.ಮಾರ್ಚ್.26: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ನಕಲಿ ಪಿಎಚ್‌ಡಿ ಸೇರಿದಂತೆ ಸುಳ್ಳು ದಾಖಲೆ ನೀಡಿ ಉದ್ಯೋಗ ಪಡೆಯುವ ಪ್ರಯತ್ನವನ್ನು ಉದ್ಯೋಗಕಾಂಕ್ಷಿಗಳು ಮಾಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಉನ್ನತ ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರು ಸಲ್ಲಿಸಿರುವ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದು, ಈ ಪೈಕಿ 22 ಅತಿಥಿ ಶಿಕ್ಷಕರು ನಕಲಿ ದಾಖಲೆ ಸಲ್ಲಿಸಿರುವುದು ಪತ್ತೆಯಾಗಿದೆ.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪಿಎಚ್‌ಡಿ ನಕಲಿ ದಾಖಲೆ ನೀಡಿದ 10 ಮಂದಿ, ವಿಶೇಷ ಚೇತನ 4 ಮಂದಿ, ಸ್ನಾತಕೋತ್ತರ ಪದವಿ ಅಂಕಪಟ್ಟಿ 2 ಮಂದಿ ಮತ್ತು ಎಂ.ಫಿಲ್‌ನ ನಕಲಿ ದಾಖಲೆ ನೀಡಿದ ಓರ್ವನನ್ನು ಪತ್ತೆ ಹಚ್ಚಲಾಗಿದೆ.

ನಕಲಿಗಳದ್ದೇ ಹಾವಳಿ:
ಇನ್ನು ಕಲಬುರಗಿ ಮತ್ತು ಬೆಳಗಾವಿಯಲ್ಲಿ ತಲಾ ನಾಲ್ವರು ಸಿಕ್ಕಿಬಿದ್ದಿದ್ದಾರೆ. ಕಲಬುರಗಿಯ ನಾಲ್ವರು ಸಹ ನಕಲಿ ಪಿಎಚ್‌ಡಿ ಪ್ರಮಾಣ ಪತ್ರ ನೀಡಿದ್ದರೆ, ಬೆಳಗಾವಿಯ ಮೂವರು ವಿಶೇಷ ಚೇತನ ಮತ್ತು ಒಬ್ಬರು ಸ್ನಾತಕೋತ್ತರ ಪದವಿ ಅಂಕಪಟ್ಟಿ ನೀಡಿದ್ದಾರೆ. ಉಳಿದಂತೆ ಬಾಗಲಕೋಟೆಯ ಇಬ್ಬರು ನಕಲಿ ಸ್ನಾತಕೋತ್ತರ ಪ್ರಮಾಣ ಪತ್ರ ನೀಡಿ ಸಿಕ್ಕಿಬಿದ್ದಿದ್ದಾರೆ, ಹಾವೇರಿ ಮತ್ತು ವಿಜಯಪುರದ ತಲಾ ಓರ್ವ ನಕಲಿ ವಿಶೇಷ ಚೇತನ, ಶಿವಮೊಗ್ಗ, ಹಾವೇರಿ, ವಿಜಯನಗರ, ಉಡುಪಿ, ಕೋಲಾರ, ಹಾಸನದ ತಲಾ ಓರ್ವ ನಕಲಿ ಪಿಎಚ್‌ಡಿ, ಉತ್ತರಕನ್ನಡದ ಓರ್ವ ನಕಲಿ ಎಂಫಿಲ್, ಕೋಲಾರ ಮತ್ತು ಬೆಳಗಾವಿಯ ಓರ್ವ ಸ್ನಾತಕೋತ್ತರ ಪದವಿ ಅಂಕಪಟ್ಟಿ ನೀಡಿ ಸಿಕ್ಕಿಬಿದ್ದಾರೆ.

ಕ್ರಿಮಿನಲ್ ಮೊಕದ್ದಮೆ: ಸಚಿವ
ಅತಿಥಿ ಉಪನ್ಯಾಸಕರು ಕರ್ತವ್ಯಕ್ಕೆ ಆಯ್ಕೆಯಾಗುವಾಗ ಸಲ್ಲಿಸಿದ ದಾಖಲೆಗಳ ನೈಜತೆ ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಿಸಿದ ಕಾಲೇಜಿನ ಪ್ರಾಚಾರ್ಯರಿಗೆ ಸೂಚಿಸಲಾಗಿದೆ. ಪರಿಶೀಲಿಸಿರುವ ಪ್ರಮಾಣಪತ್ರಗಳ ಪೈಕಿ 20 ಅತಿಥಿ ಉಪನ್ಯಾಸಕ ಸಲ್ಲಿಸಿರುವ ದಾಖಲೆ ನೈಜತೆಯಿಂದ ಕೂಡಿಲ್ಲ. ಕಾಯಂ ಬೋಧಕರು ನಕಲಿ ಪ್ರಮಾಣ ಪತ್ರ ಹಾಜರುಪಡಿಸಿ ಕೆಲಸ ಪಡೆದಿದ್ದರೆ ಕ್ರಿಮಿನಲ್ ಕೇಸ್‌ ದಾಖಲಿಸಲಾಗುವುದೆಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology