Home » ಲೈವ್ ನ್ಯೂಸ್ » 2026-27ರ RTE ಆರ್‌ಟಿಇ ಪ್ರವೇಶಕ್ಕೆ ಪ್ರಕಟ!

2026-27ರ RTE ಆರ್‌ಟಿಇ ಪ್ರವೇಶಕ್ಕೆ ಪ್ರಕಟ!

ಬೆಂಗಳೂರು.15.ಮಾರ್ಚ್.26: ರಾಜ್ಯ ಸರ್ಕಾರ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 2026-27ನೇ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಉಚಿತ ಸೀಟುಗಳ ಹಂಚಿಕೆಗೆ ನಿಗದಿಪಡಿಸಿದ್ದ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಮತ್ತೊಮ್ಮೆ ಪರಿಷ್ಕರಿಸಿ ಏಪ್ರಿಲ್.9ರಿಂದ ಅರ್ಜಿ ಆನ್ಲೈನ್ ಮುಖಾಂತರ ಸಲಿಕ್ಕೆ ಪ್ರಾರಂಭ ಆಗ್ಲಿದೆ.

ಆರ್‌ಟಿಸಿ ಸೀಟು ಪ್ರಕಟಣೆ ಯಾವಾಗ?

ಅರ್ಹ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಒಂದನೇ ತರಗತಿಯಲ್ಲಿ ಲಭ್ಯವಿರುವ ಶೇ.25ರಷ್ಟು ಆರ್‌ಟಿಸಿ ಸೀಟುಗಳನ್ನು ಏ.6ರಂದು ಪ್ರಕಟಿಸಲಾಗುವುದು. ಏ.7 ಹಾಗೂ 8ರಂದು ಆನ್‌ಲೈನ್‌ನಲ್ಲಿ ಪ್ರಯೋಗಾರ್ಥ ಅರ್ಜಿ ಸಲ್ಲಿಕೆ, ಏ.9ರಿಂದ ಮೇ 7ರವರೆಗೆ ನೈಜ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಇರಲಿದೆ ಎಂದು ತಿಳಿಸಲಾಗಿದೆ.

ಮೇ 16ರಂದು ಆನ್‌ಲೈನ್ ಲಾಟರಿ ಮೂಲಕ ಹಂಚಿಕೆ

ಮೇ 12ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಿದೆ. ಮೇ 16ರಂದು ಆನ್‌ಲೈನ್ ಲಾಟರಿ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆಯಾಗಲಿದೆ. ಸೀಟು ಪಡೆದವರು ಜೂ.1ರೊಳಗಾಗಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಬೇಕು. ಜೂ.5ರಂದು ಎರಡನೇ ಸುತ್ತಿನ ಸೀಟು ಹಂಚಿಕೆಯಾಗಲಿದ್ದು, ಇವರಿಗೆ ಜೂ.15ರವರೆಗೆ ಆಯಾ ಶಾಲೆಗಳಿಗೆ ದಾಖಲಾಗುವಂತೆ ತಿಳಿಸಲಾಗಿದೆ.

Author

ಪ್ರಮುಖ ಸುದ್ದಿ

Stock market

Astrology