Home » ಲೈವ್ ನ್ಯೂಸ್ » ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಲಬುರಗಿ.20.ಫೆಬ್ರವರಿ.26: ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ  ವಿಭಾಗದ ವತಿಯಿಂದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿಜಯಾ ಪಾಟೀಲ್ ಆಗಮಿಸಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತ ಸಮಾಜದಲ್ಲಿರುವ ಅಸಮಾನತೆ, ಬೇಧಭಾವ, ತಾರತಮ್ಯವನ್ನು ನಿವಾರಿಸಲು ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಲು ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಜಾತಿ, ಧರ್ಮ, ಲಿಂಗ, ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿ ಯಾವುದೇ ಆಗಿರಲಿ ಸಮಾನ ಹಕ್ಕುಗಳು ಮತ್ತು ಗೌರವ ದೊರೆಯಬೇಕು ಎಂಬುದೇ ಸಾಮಾಜಿಕ ನ್ಯಾಯದ ಉದ್ದೇಶ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ನಮ್ಮ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಪ್ರೊ,ವೀಣಾ ಹೊನಗುಂಟಿಕರ್ ಮೇಡಂ ಅವರು    ಅಧ್ಯಕ್ಷೀಯ ನುಡಿಗಳನ್ನಾಡಿದರು.
ವಿಭಾಗದ ಮುಖ್ಯಸ್ಥರು ಶ್ರೀಮತಿ ಗೀತಾ ಪಾಟೀಲ ಅವರು ಸ್ವಾಗತ, ಅತಿಥಿಪರಿಚಯ ಮತ್ತು ಪ್ರಸ್ತಾವನೆ ಮಾಡಿದರು.
ವಿದ್ಯಾರ್ಥಿನಿ  ಕು.ದಿವ್ಯಾ ನಿರೂಪಣೆ ಮಾಡಿದರು.
ಕು ಕಾವೇರಿ ಪ್ರಾರ್ಥನೆಗೀತೆ ಹಾಡಿದರು.
ಕು ಐಶ್ವರ್ಯ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ  ಡಾ. ಶ್ರೀದೇವಿ ಸರಡಗಿ, ಡಾ. ನಾಗರತ್ನ ಎಸ್, ಡಾ. ರೇಣುಕಾ ಹೆಚ್,ಕವಿತಾ ಎ ಎಮ್ ಹಾಗೂ ವಿವಿಧ ವಿಭಾಗದ ಪ್ರಾದ್ಯಾಪಕರು ಭಾಗವಹಿಸಿದರು.

Author

ಪ್ರಮುಖ ಸುದ್ದಿ

Stock market

Astrology