Home » ಲೈವ್ ನ್ಯೂಸ್ » ರಾಜ್ಯ ಬಾಲ ಕಾರ್ಮಿಕ ಯೋಜನಾ ಸೊಸೈಟಿಗೆ ದೇಣಿಗೆ ನೀಡಲು ಮನವಿ

ರಾಜ್ಯ ಬಾಲ ಕಾರ್ಮಿಕ ಯೋಜನಾ ಸೊಸೈಟಿಗೆ ದೇಣಿಗೆ ನೀಡಲು ಮನವಿ

ಬೀದರ.18.ಜನವರಿ.26:- ರಾಜ್ಯ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತು 14 ವರ್ಷದೊಳಗಿನ ಬಾಲ ಕಾರ್ಮಿಕ ಮಕ್ಕಳು ಹಾಗೂ 18 ವರ್ಷದೊಳಗಿನ ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂದು ಜನರಲ್ಲಿ ಹಾಗೂ ಅಂಗಡಿ ಮಾಲೀಕರಲ್ಲಿ ಅರಿವು ಕಾರ್ಯಕ್ರಮ ಜನ ಜಾಗೃತಿ ಮೂಡಿಸಲು ಸಮೀಕ್ಷೆ, ಕಾರ್ಯಗಾರ, ಶಿಕ್ಷಣ, ಸಂವಹನ ಇತರೆ ಚಟುವಟಿಕೆ ಹಮ್ಮಿಕೊಳ್ಳಲು ಮತ್ತು ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮುಕ್ತ ರಾಜ್ಯವನ್ನಾಗಿಸಲು ಹಾಗೂ ಈ ಕೆಟ್ಟ ಪದ್ದತಿಯನ್ನು ಸಮಾಜದಿಂದ ತೊಲಗಿಸಲೂ ವ್ಯಾಪಕ ಪ್ರಚಾರ ಮಾಡಲು ಉದ್ಯೋಗದಾತರು ಹಾಗೂ ಸ್ಥಳೀಯ ಸಂಸ್ಥೆಯವರಿಂದ ದೇಣಿಗೆ ಪಡೆಯಲು ನಿರ್ದೇಶನವಿದ್ದು, ಸಾರ್ವಜನಿಕರು, ಉದ್ಯೋಗದಾತರು ಹಾಗೂ ಸ್ಥಳೀಯ ಸಂಸ್ಧೆಯವರು ದೇಣಿಗೆ ನೀಡಲು ಇಚ್ಚಿಸಿದಲ್ಲಿ ರಾಜ್ಯ ಬಾಲ ಕಾರ್ಮಿಕ ಯೋಜನಾ ಸೋಸೈಟಿಯ ಖಾತೆ ಸಂಖ್ಯೆ Canara bank Account Number: 110058103941, IFSC code: CNRB0007295, Bangalore Workers Welfare Board Branch ಗೆ ಜಮಾ ಮಾಡಲು ಸಾರ್ವಜನಿಕರು, ಉದ್ಯೋಗದಾತರು ಹಾಗೂ ಸ್ಥಳೀಯ ಸಂಸ್ಥೆಯವರು ಸಹಕರಿಸಲು ಬೀದರ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology