Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವವರೆಗೆ ಅನಿರ್ಧಿಷ್ಟಾವಧಿ ಧರಣಿ.

ಅತಿಥಿ ಉಪನ್ಯಾಸಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವವರೆಗೆ ಅನಿರ್ಧಿಷ್ಟಾವಧಿ ಧರಣಿ.

ಭದ್ರಾವತಿ.12.ಜನವರಿ.26: ಪ್ರಸ್ತುತ 2025-26 ನೇ ಸಾಲಿಗೆ ಅತಿಥಿ ಉಪನ್ಯಾಸಕರು ಯುಜಿಸಿ 2018 ನಿಯಮ ಪ್ರಕಾರ ರಾಜ್ಯದಲ್ಲಿ 6600 ಅತಿಥಿ ಉಪನ್ಯಾಸಕರು ಬೀದಿಪಾಲು ಆಗಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಾನ್-ಯುಜಿಸಿ ಅತಿಥಿ ಉಪನ್ಯಾಸಕರಸಂಘ ರಾಜ್ಯದೇಕ್ಷ ವೆಂಕಟೇಶ್ ಸಿ ಅವರು ತಿಳಿಸಿದ್ದಾರೆ.

ಚಳಿಗಾಲ ಅಧಿವೇಶನ ಸಮಯದಲ್ಲಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಮತ್ತು ಉಪನ್ಯಾಸಕಿಯರು ತಮ್ಮ ಹಕ್ಕಿಗಾಗಿ ಕಣ್ಣೀರು ಸುರಿಸಿದರೆ, ಓರ್ವ ಅತಿಥಿ ಉಪನ್ಯಾಸಕ ಆತ್ಮಹತ್ಯೆಗೂ ಯತ್ನಿಸಿದರು.

ಚಳಿಗಾಲ ಅಧಿವೇಶನದ ವೇಳೆ ಪ್ರತಿಭಟನೆಯು ಸಾಕ್ಷಿಯಾಯಿತು. ಸರ್ಕಾರ ಹುಸಿ ಭರವಸೆ ನೀಡಿದೆ.

2018 ಯುಜಿಸಿ ನಿಯಮದಿಂದ ಕೆಲಸ ಕಳೆದುಕೊಂಡ 6600 ನಾನ್-ಯುಜಿಸಿ ಅತಿಥಿ ಉಪನ್ಯಾಸಕರಿರಿಗೆ ಸರ್ಕಾರದವತಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವವರೆಗೆ ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ಅನಿರ್ದಿಷ್ಟಾವಧಿವರೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುತ್ತದೆ ಹಾಗಾಗಿ ಕುಡಿಯುವ ನೀರು,ಮೊಬೈಲ್ ಶೌಚಾಲಯ. ಅಂಬುಲೆನ್ಸ್, ಕಸದ ವಾಹನ ವ್ಯವಸ್ಥೆ ಕೋರಿ ಮನವಿ, ಮಾನ್ಯರೇ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಾನ್-ಯುಜಿಸಿ ಅತಿಥಿ ಉಪನ್ಯಾಸಕರಸಂಘ(ರಿ.) ಭದ್ರಾವತಿ,

ವತಿಯಿಂದ ಪ್ರಸ್ತುತ 2025-26 ನೇ ಸಾಲಿಗೆ ಉನ್ನತ ಶಿಕ್ಷಣ ಇಲಾಖೆಯು ಸುಮಾರು 30 ವರ್ಷಗಳ ಕಾಲ ದೀರ್ಘಕಾಲ ಸೇವೆ ಸಲ್ಲಿಸಿದರಿಗೆ 2018 ರ ಯುಜಿಸಿ ನಿಯಮದನ್ವಯ 6600 ನಾನ್-ಯುಜಿಸಿ ಅತಿಥಿ ಉಪನ್ಯಾಸಕರನ್ನು ಡಿಸೆಂಬರ್-03 ತಾರೀಖಿನಿಂದ ಕೈಬಿಡಲಾಗಿದೆ. ಹಾಗಾಗಿ ರಾಜ್ಯದ 430 ಕಾಲೇಜುಗಳಿಂದ ನಾನ್-ಯುಜಿಸಿ ಅತಿಥಿ ಉಪನ್ಯಾಸಕರುಗಳು ದಿನಾಂಕ:12-12-2025 ರಂದು ಬೆಳಗಾವಿ ಸುವರ್ಣ ಸೌಧದ ಬಳಿ ಸೇರಿ ಉನ್ನತ ಶಿಕ್ಷಣ ಇಲಾಖೆಯು ಕೈಬಿಡದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು.

ಈ ಪ್ರತಿಭಟನೆ ಸ್ಥಳಕ್ಕೆ ಸರ್ಕಾರದ ಪರವಾಗಿ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರು, ವಿಧಾನ ಪರಿಷತ್ ಸದಸ್ಯರು, ಬೆಳಗಾವಿ ಮಾನ್ಯ ಜಿಲ್ಲಾಧಿಕಾರಿಗಳು ಬೇಟಿ ಮಾಡಿ ಸರ್ಕಾರದ ಮಧ್ಯಸ್ಥಿಕೆ ವಹಿಸಿ ಅತೀ ಶೀಘ್ರದಲ್ಲಿ 6600 ನಾನ್-ಯುಜಿಸಿ ಆತಿಥಿ ಉಪನ್ಯಾಸಕರಿಗೆ ಕೈಬಿಡದಂತೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು ಹಾಗಾಗಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಆದರೆ ಇದುವರೆಗೂ ಸರ್ಕಾರವತಿಯಿಂದ ಯಾವುದೇ ರೀತಿಯ ವರ್ಯಾಯ ವ್ಯವಸ್ಥೆಯಾಗಲಿ,ನಮ್ಮ ಸಮಸ್ಯೆ ಕುರಿತು ಸಭೆಗಳಾಗಲಿ ನಡೆದಿರುವುದಿಲ್ಲ ಕೆಲಸ ಕಳೆದುಕೊಂಡು ಮನೆಯಲ್ಲಿ ಉಳಿಯಲಾಗಿದೆ.

ಇದನ್ನೆ ನಂಬಿ ಜೀವನವನ್ನು ನಡೆಸಿಕೊಂಡು ಬಂದಿರುವ ನಮಗೆ ಕುಟುಬ ನಿರ್ವಹಣೆ ಮಾಡುವುದು ಕಷ್ಟವಾಗಿರುತ್ತದೆ, ಹಾಗಾಗಿ ನಮ್ಮ ಬೇಡಿಕೆ ಈಡೇರಿಕೆಗಾಗಿ ದಿನಾಂಕ: 16-01-2026 ರಿಂದ ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ಕೆಲಸ ಕಳೆದುಕೊಂಡ 6600 ನಾನ್-ಯುಜಿಸಿ ಅತಿಥಿ ಉಪನ್ಯಾಸಕರಿಗೆ ಸರ್ಕಾರದವತಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವವರೆಗೆ ಅನಿರ್ಧಿಷ್ಟಾವಧಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುತ್ತದೆ ಆದ ಕಾರಣ ಪ್ರತಿಭಟನಕಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆವತಿಯಿಂದ ಕುಡಿಯುವ ನೀರು, ಮೊಬೈಲ್ ಶೌಚಾಲಯ. ಅಂಬುಲೆನ್ಸ್, ಕಸದ ವಾಹನ ವ್ಯವಸ್ಥೆ ಕೋರಿ ಮನವಿ ಸಲ್ಲಿಸಲಾಗುತ್ತಿದೆ. ದಯಮಾಡಿ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ವಿನಂತಿ.

Author

ಪ್ರಮುಖ ಸುದ್ದಿ

Stock market

Astrology