Home » ಲೈವ್ ನ್ಯೂಸ್ » ಡಿ.ಕೆ.ಶಿವಕುಮಾರ್‌ಗೆ ಮಹತ್ವದ ಜವಾಬ್ದಾರಿ ನೀಡಿದ ಹೈಕಮಾಂಡ್

ಡಿ.ಕೆ.ಶಿವಕುಮಾರ್‌ಗೆ ಮಹತ್ವದ ಜವಾಬ್ದಾರಿ ನೀಡಿದ ಹೈಕಮಾಂಡ್

ಬೆಂಗಳೂರು.08.ಜನವರಿ.26: ಮುಂಬರುವ 5 ರಾಜ್ಯಗಳ ಚುನಾವಣೆ ಜನಾಬ್ದಾರಿ ಮುಖ್ಯ ಮಂತ್ರಿಯಾಗುವ ಉತ್ಸಾಹದಲ್ಲಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಅವರಿಗೆ ಹೈಕಮಾಂಡ್  ಮಹತ್ವಪೂರ್ಣ ಜವಾಬ್ದಾರಿ ನೀಡಲಾಗಿದೆ. 2026ರಲ್ಲಿ ನಡೆಯಲಿರುವ 5 ರಾಜ್ಯಗಳ ವಿಧಾನಸಭೆ ಚುನಾವಣೆ ತಯಾರಿ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಈ ತೀರ್ಮಾನ ಕೈಗೊಂಡಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಧಾನಸಭೆ ಚುನಾವಣೆ ನಡೆಯುವ 5 ರಾಜ್ಯಗಳಿಗೆ ಎಐಸಿಸಿ ಹಿರಿಯ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.

ಕರ್ನಾಟಕದಿಂದ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರಿಗೆ ಉಸ್ತುವಾರಿಯನ್ನು ಕೊಡಲಾಗಿದೆ.

ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅಸ್ಸಾಂ ರಾಜ್ಯದ ಎಐಸಿಸಿ ಹಿರಿಯ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಈ ವರ್ಷ ಅಸ್ಸಾಂ ರಾಜ್ಯದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಹಾಲಿ ರಾಜ್ಯದಲ್ಲಿದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ.

ಅಸ್ಸಾಂ ಉಸ್ತುವಾರಿಗಳು

ಭೂಪೇಶ್ ಬಘೇಲ್
ಡಿ.ಕೆ.ಶಿವಕುಮಾರ್
ಬಂಧು ಟರ್ಕಿ
ಕೇರಳ ರಾಜ್ಯದ ಉಸ್ತುವಾರಿಗಳು

ಸಚಿನ್ ಪೈಲೆಟ್
ಕೆ.ಜೆ.ಜಾರ್ಜ್
ಇಮ್ರಾನ್ ಪ್ರತಾಪ್ ಗಡಿ
ಕನ್ನಯ್ಯ ಕುಮಾರ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸ್ಸಾಂ, ಕೇರಳ, ತಮಿಳುನಾಡು & ಪುದುಚೇರಿ, ಪಶ್ಚಿಮ ಬಂಗಾಳ ರಾಜ್ಯಗಳಿಗೆ ಎಐಸಿಸಿ ಹಿರಿಯ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಕರ್ನಾಟಕದ ಇಬ್ಬರ ನಾಯಕರಿಗೆ ಮಾತ್ರ ಜವಾಬ್ದಾರಿ ವಹಿಸಲಾಗಿದೆ.

Author

ಪ್ರಮುಖ ಸುದ್ದಿ

Stock market

Astrology