Home » ಲೈವ್ ನ್ಯೂಸ್ » ಆಧಾರ್‌ ಸೂಪರ್‌ವೈಸರ್‌ (Aadhaar Supervisor) ಆಪರೇಟರ್‌ ಹುದ್ದೆಗೆ ಅರ್ಜಿ ಆಹ್ವಾನ.

ಆಧಾರ್‌ ಸೂಪರ್‌ವೈಸರ್‌ (Aadhaar Supervisor) ಆಪರೇಟರ್‌ ಹುದ್ದೆಗೆ ಅರ್ಜಿ ಆಹ್ವಾನ.

Governance Services India (Aadhaar) ಯುಐಡಿಎಐ ಪ್ರಧಾನ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ ನಿಯೋಜನೆಯ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಭಾರತ ಸರ್ಕಾರಿ ವಲಯದ ಅಭ್ಯರ್ಥಿಗಳಿಂದ ಯುಐಡಿಎಐ ಅರ್ಜಿಗಳನ್ನು ಆಹ್ವಾನಿಸುತ್ತದೆ.

ಸಂಸ್ಥೆಯು ಆಧಾರ್‌ ಸೂಪರ್‌ವೈಸರ್‌ (Aadhaar Supervisor)/ಆಪರೇಟರ್‌ (Aadhaar Operator)ಹುದ್ದೆಗಳಿಗಾಗಿ ಒಟ್ಟು 282 ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. 10ನೇ, 12ನೇ, ITI ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ ಅರ್ಜಿ ಪ್ರಕ್ರಿಯೆ 27-12-2025 ರಿಂದ ಆರಂಭವಾಗಿದ್ದು, 31-01-2026 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ cscspv.in ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ನೇಮಕಾತಿ ಸಂಕ್ಷಿಪ್ತ ವಿವರ :
ಸಂಸ್ಥೆ: CSC e-Governance Services India (Aadhaar)
ಹುದ್ದೆ ಹೆಸರು: Aadhaar Supervisor/Operator
ಒಟ್ಟು ಹುದ್ದೆಗಳು: 282 (ಸುಮಾರು)
ವೇತನ: ಸಂಬಂಧಿತ ರಾಜ್ಯದ ಅರ್ಧ-ಕುಶಲ ಕಾರ್ಮಿಕರಿಗೆ ನಿಗದಿಪಡಿಸಿದ ಕನಿಷ್ಠ ವೇತನ
ಅರ್ಹತೆ: 10ನೇ / 12ನೇ / ITI
ವಯಸ್ಸು: ಕನಿಷ್ಠ 18 ವರ್ಷ
ಅರ್ಜಿ ಆರಂಭ ದಿನಾಂಕ: 27-12-2025
ಅರ್ಜಿ ಕೊನೆಯ ದಿನಾಂಕ: 31-01-2026
ಅಧಿಕೃತ ವೆಬ್‌ಸೈಟ್: cscspv.in

ರಾಜ್ಯವಾರು ಖಾಲಿ ಹುದ್ದೆಗಳ ವಿವರ (District Level)
ಆಂಧ್ರ ಪ್ರದೇಶ – 04
ಅಸ್ಸಾಂ – 03
ಬಿಹಾರ – 04
ಛತ್ತೀಸ್‌ಗಢ – 08
ಗುಜರಾತ್ – 06
ಹರಿಯಾಣ – 07
ಜಾರ್ಖಂಡ್ – 07
ಕರ್ನಾಟಕ – 10
ಕೇರಳ – 11
ಲಡಾಖ್ – 01
ಮಧ್ಯ ಪ್ರದೇಶ – 28
ಮಹಾರಾಷ್ಟ್ರ – 20
ಮೇಘಾಲಯ – 01
ನಾಗಾಲ್ಯಾಂಡ್ – 01
ಒಡಿಶಾ – 02
ಪುದುಚೇರಿ – 01
ಪಂಜಾಬ್ – 12
ರಾಜಸ್ಥಾನ – 04
ತಮಿಳುನಾಡು – 03
ತೆಲಂಗಾಣ – 11
ಉತ್ತರ ಪ್ರದೇಶ – 23
ಉತ್ತರಾಖಂಡ – 03
ಪಶ್ಚಿಮ ಬಂಗಾಳ – 05

ಒಟ್ಟು (ರಾಜ್ಯ ಮಟ್ಟ): 184 ಹುದ್ದೆಗಳು
ಜಿಲ್ಲಾ ಮಟ್ಟದ ಮಾನವ ಸಂಪನ್ಮೂಲ: 98 ಹುದ್ದೆಗಳು

ಅರ್ಹತಾ ಮಾನದಂಡ :
12ನೇ ತರಗತಿ (PUC/ಸೀನಿಯರ್ ಸೆಕೆಂಡರಿ) ಅಥವಾ
10ನೇ + 2 ವರ್ಷ ITI ಅಥವಾ
10ನೇ + 3 ವರ್ಷ ಪಾಲಿಟೆಕ್ನಿಕ್ ಡಿಪ್ಲೊಮಾ
UIDAI ಮಾನ್ಯತೆ ಪಡೆದ ಪರೀಕ್ಷಾ ಮತ್ತು ಪ್ರಮಾಣೀಕರಣ ಸಂಸ್ಥೆಯಿಂದ ನೀಡಲಾದ Aadhaar Operator/Supervisor Certificate ಕಡ್ಡಾಯ

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಆರಂಭ: 27-12-2025
ಆನ್‌ಲೈನ್‌ ಅರ್ಜಿ ಕೊನೆಯ ದಿನಾಂಕ: 31-01-2026

ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಮೊದಲು Aadhaar Supervisor Exam ಬರೆಯಬೇಕು:
https://uidai.nseitexams.com/UIDAI/LoginAction_input.action
ಪರೀಕ್ಷೆಗೆ ಅರ್ಜಿ ಸಲ್ಲಿಸಿದ ನಂತರ ರಾಜ್ಯ ತಂಡದ ಅನುಮೋದನೆ ಅಗತ್ಯ.
ಅನುಮೋದನೆಯ ಬಳಿಕ LMS Certification ಪಡೆಯಬೇಕು:
https://e-learning.uidai.gov.in
LMS ಐಡಿ ಮತ್ತು ಪಾಸ್‌ವರ್ಡ್‌ ಸೃಷ್ಟಿಸಿ ಪ್ರಮಾಣೀಕರಣ ಪರೀಕ್ಷೆ ಬರೆಯಬಹುದು.

ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸಲು : https://cscspv.in/ask-job.html

Author

ಪ್ರಮುಖ ಸುದ್ದಿ

Stock market

Astrology