ಬೀದರ, ಡಿಸೆಂಬರ್.25:- ಕನ್ನಡದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಪ್ರಖ್ಯಾತ ಲೇಖಕಿ, ಸಮಾಜ ಸೇವಕಿ ಡಾ. ಜಯದೇವಿ ತಾಯಿ ಲಿಗಾಡೆ ಹಾಗೂ ಕನ್ನಡ ಹೋರಾಟಗಾರ ,ಶ್ರೀಮಾನ್ ಸಾರ್ವಜನಿಕ ಎಂದೇ ಪ್ರಖ್ಯಾತರಾದ ಶ್ರೀ ಪ್ರಭುರಾವ್ ಕಂಬಳಿವಾಲೆ ಅವರ ಹೆಸರಿನಲ್ಲಿ ಟ್ರಸ್ಟ್ ಗಳನ್ನು ರಚಿಸಲು ನಿರ್ಧರಿಸಲಾಗಿದ್ದು ಈ ಸಂಬoಧ ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಹೈದರಾಬಾದ್ ಕರ್ನಾಟಕದ ಜನತೆಯ ಬಹುದಿನದ ಅಪೇಕ್ಷೆಯಂತೆ ಈ ಎರಡು ಟ್ರಸ್ಟ್ ಗಳನ್ನು ರಚಿಸುವ ಸಂಬoಧ ಬಂದಿದ್ದ ಪ್ರಸ್ತಾವನೆಗೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಈ ಸಂಬoಧ ಕೂಡಲೇ ಆದೇಶ ಹೊರಡಿಸುವಂತೆ ಇಲಾಖಾ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಇಬ್ಬರು ಮಹನೀಯರು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತಿಗೆ ನೀಡಿದ ಕೊಡುಗೆ ಅನನ್ಯವಾದದ್ದು, ಹಾಗಾಗಿ ಈ ಟ್ರಸ್ಟ್ ಗಳನ್ನು ಅವರ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ರಚಿಸಲಾಗುತ್ತಿದೆ.
ಈ ಎರಡು ಟ್ರಸ್ಟ್ ಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ನೇಮಕ ಮಾಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.






Any questions related to ಡಾ. ಜಯದೇವಿ ತಾಯಿ ಲಿಗಾಡೆ ಹಾಗೂ ಶ್ರೀ ಪ್ರಭುರಾವ್ ಕಂಬಳಿ ವಾಲೆ ಟ್ರಸ್ಟ್ ರಚನೆಗೆ ಆದೇಶ- ಸಚಿವ ಶಿವರಾಜ ತಂಗಡಗಿ?