Home » ಲೈವ್ ನ್ಯೂಸ್ » ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಯಚೂರು.14.ಸೆಪ್ಟೆಂಬರ.25: ರಾಯಚೂರು ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳಿಗೆ ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಸ್ವೀಕರಿಸಿರುವ ಅರ್ಜಿಗಳಲ್ಲಿ ಅಭ್ಯರ್ಥಿಗಳ ವಾಸ ಸ್ಥಳದ ಹಾಗೂ ಇತರೆ ದಾಖಲಾತಿಗಳು ಸಲ್ಲಿಸದೇ ಇರುವ ಕಾರಣ ಅರ್ಜಿ ತಿರಸ್ಕೃತಗೊಂಡಿರುತ್ತವೆ. ಮುಂದೆ ಈ ರೀತಿ ಮರುಕಳಿಸಬಾರದೆಂಬ ಹಾಗೂ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಇನ್ನು ಕೆಲ ದಿನಗಳಲ್ಲಿ ಸಹಾಯಕಿ ಹುದ್ದೆಯಿಂದ ಮುಂಬಡ್ತಿ ಹಾಗೂ ನಿವೃತ್ತಿ ಹೊಂದಿ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುವುದು.

ಅರ್ಜಿಯೊಂದಿಗೆ ಅಗತ್ಯವಿರುವ 10ನೇ ತರಗತಿ ಅಂಕಪಟ್ಟಿ, ಪಿ.ಯು.ಸಿ. ಅಂಕಪಟ್ಟಿ, ಪ್ರಸ್ತುತ ಅಂತರ ಪ್ರಮಾಣ ಪತ್ರ ಮತ್ತು ಪ್ರಸ್ತುತ ವಾಸ ಸ್ಥಳ ಪ್ರಮಾಣ ಪತ್ರದ ದಾಖಲಾತಿಗಳನ್ನು ಧೃಡೀಕರಿಸಿ ಸಲ್ಲಿಸಬೇಕು. ಈ ಎಲ್ಲಾ ದಾಖಲಾತಿಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಂಡು ಆನ್‌ಲೈನ್ ಮೂಲಕ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology