Home » ಲೈವ್ ನ್ಯೂಸ್ » ನ್ಯಾಯಾಲಯ ತೀರ್ಪಿನ ನಂತರ ಅತಿಥಿ ಉಪನ್ಯಾಸಕರ ನೇಮಕ: ಡಾ| ಎಂ. ಸಿ. ಸುಧಾಕರ್‌

ನ್ಯಾಯಾಲಯ ತೀರ್ಪಿನ ನಂತರ ಅತಿಥಿ ಉಪನ್ಯಾಸಕರ ನೇಮಕ: ಡಾ| ಎಂ. ಸಿ. ಸುಧಾಕರ್‌

ಬೆಂಗಳೂರು.05.ಸೆಪ್ಟೆಂಬರ್.25:- ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿ ಸೋಮವಾರ ಹೈಕೋರ್ಟ್‌ನಲ್ಲಿ ತೀರ್ಪು ಬರುವ ಸಾಧ್ಯತೆಯಿದ್ದು, ನಾವು ಕಾನೂನಿನ ಚೌಕಟ್ಟಿನಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಮಾನವೀಯ ನೆಲಗಟ್ಟನ್ನು ಯೋಚಿಸಬೇಕಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ. ಸಿ.ಸುಧಾಕರ್‌ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಜರಗಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

36 ಸಾವಿರ ಹೆಣ್ಣಕ್ಕಳಿಗೆ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿವೇತನ
ಹತ್ತನೇ ತರಗತಿ ಮತ್ತು ಪಿಯುಸಿವನ್ನು ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿ ಮಾಡಿರುವ ಹೆಣ್ಮಕ್ಕಳು ವೈದ್ಯಕೀಯ, ಎಂಜಿನಿಯರಿಂಗ್‌, ಪದವಿ, ಡಿಪ್ಲೊಮಾ ಸಹಿತ ಎರಡು ವರ್ಷಕ್ಕಿಂತ ಹೆಚ್ಚಿನ ಯಾವುದೇ ಉನ್ನತ ಶಿಕ್ಷಣ ಪಡೆಯಲು ಮುಂದಾದರೆ ಅವರಿಗೆ ವರ್ಷಕ್ಕೆ 36 ಸಾ. ರೂ. ವಿದ್ಯಾರ್ಥಿವೇತನ ನೀಡುವ ಯೋಜನೆಯನ್ನು ಅಜೀಂ ಪ್ರೇಮ್‌ಜೀ ಪ್ರತಿಷ್ಠಾನದ ಸಹಯೋಗದೊಂದಿಗೆ ಜಾರಿಗೆ ತರಲಿದ್ದೇವೆ. ಈ ಯೋಜನೆಯ ಪ್ರಯೋಜನ 36 ಸಾವಿರ ಹೆಣ್ಣು ಮಕ್ಕಳಿಗೆ ಲಭ್ಯವಾಗಲಿದೆ. ಈ ಕಾರ್ಯಕ್ರಮಕ್ಕೆ ಸೆ. 19ರಂದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನ ನೆರವಿನೊಂದಿಗೆ 2,500 ಕೋಟಿ ರೂ. ವೆಚ್ಚದಲ್ಲಿ 40 ಪ್ರಥಮ ದರ್ಜೆ ಕಾಲೇಜು, 10 ಪಾಲಿಟೆಕ್ನಿಕ್‌ ಕಾಲೇಜುಗಳನ್ನು ಮಾದರಿ ಕಾಲೇಜು ಆಗಿ ಅಭಿವೃದ್ಧಿ ಪಡಿಸಲು ಮತ್ತು 9 ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

ದ್ವಿಭಾಷಾ ನೀತಿ ಎಂದಾಗ ಭಾಷೆಯ ಮೇಲಿನ ಅಭಿಮಾನದ ಜತೆಗೆ ಮಕ್ಕಳ ಕನಸುಗಳನ್ನು ಸಾಕಾರಗೊಳಿಸಲು ಸ್ಪರ್ಧಾತ್ಮಕ ಜಗತ್ತಿನ ಆವಶ್ಯಕತೆಯನ್ನು ಅರಿತುಕೊಂಡು ಬದಲಾವಣೆಗಳನ್ನು ಮಾಡುವುದು ಆವಶ್ಯಕ.
– ಡಾ| ಎಂ. ಸಿ. ಸುಧಾಕರ್‌, ಉನ್ನತ ಶಿಕ್ಷಣ ಸಚಿವ

Author

ಪ್ರಮುಖ ಸುದ್ದಿ

Stock market

Astrology