Home » ಲೈವ್ ನ್ಯೂಸ್ » ಪ್ರವಾಸೋದ್ಯಮ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ

ಪ್ರವಾಸೋದ್ಯಮ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ

ಬೀದರ.03.ಸೆಪ್ಟೆಂಬರ್.25:- ಪ್ರವಾಸೋದ್ಯಮ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ, ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರಬೇತಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿಗೆ ಸೇರಿದ 292 ಅಭ್ಯರ್ಥಿಗಳಿಗೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸಟ್ಯೂಟ್ (ಎಫ್‌ಸಿಐ) ಮೈಸೂರು ಹಾಗೂ ಇನ್ಸಟ್ಯೂಟ್ ಆಫ್ ಹೋಟೆಲ್ ಮ್ಯಾನೇಜಮೆಂಟ್ (ಐಎಚ್‌ಎಂ) ಬೆಂಗಳೂರು ಅವರ ಮೂಲಕ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ಬೀದರ ಜಿಲ್ಲೆಗೆ ಮಲ್ಟಿ ಕೂಸಿನ್ ಕುಕ್: ಪ.ಜಾ-1, ಪ.ಪಂ-3 ಒಟ್ಟು 04 ಹಾಗೂ ರೂಮ್ ಅಟೆಂಡೆAಟ್: ಪ.ಜಾ-1, ಪ.ಪಂ-1 ಒಟ್ಟು 02 ಬಾಕಿ ಗುರಿಗಳು ಉಳಿದಿರುತ್ತವೆ.

ಈಗಾಗಲೇ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್‌ಗಳಲ್ಲಿ ಕೆಲಸ ಖಾತರಿಯಾಗಿರುತ್ತದೆ. ತರಬೇತಿ ಪಡೆಯುವ ವೇಳೆ 2000 ರೂ.ಗಳ ಮಾಹೆಯಾನ ಸ್ಟೆöÊಫೆಂಡ್ ನೀಡಲಾಗುತ್ತದೆ. ತರಬೇತಿಗೆ ಹಾಜರಾಗುವವರಿಗೆ ವಸತಿ, ಉಟೋಪಚಾರ ಹಾಗೂ ಯೂನಿಫಾರ್ಮ ನೀಡಲಾಗುತ್ತದೆ. ತರಗತಿಯ ತರಬೇತಿ ಜೊತೆಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್‌ಗಳಲ್ಲಿ ಓನ್ ಜಾಬ್ ಟ್ರೆöÊನಿಂಗ್ ಸಹ ನೀಡಲಾಗುತ್ತದೆ.

ಅರ್ಹರು ಅರ್ಜಿ ನಮೂನೆಯನ್ನು ಬೀದರ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ದ್ವಿಪ್ರತಿಯಲ್ಲಿ ಎಲ್ಲಾ ಅಗತ್ಯ ಪ್ರಮಾಣ ಪತ್ರಗಳ ಸ್ವಯಂ ದೃಢೀಕೃತ ಪತ್ರಗಳೊಂದಿಗೆ ದಿನಾಂಕ: 06-09-2025 ರೊಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೀದರ ಇಲ್ಲಿಗೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology