Home » ಲೈವ್ ನ್ಯೂಸ್ » ಇಂದು ಪೌರಾಡಳಿತ ಸಚಿವ ರಹೀಂ ಖಾನ್ ಅವರ ಬೀದರ ಜಿಲ್ಲಾ ಪ್ರವಾಸ

ಇಂದು ಪೌರಾಡಳಿತ ಸಚಿವ ರಹೀಂ ಖಾನ್ ಅವರ ಬೀದರ ಜಿಲ್ಲಾ ಪ್ರವಾಸ

ಬೀದರ.30.ಅಗಸ್ಟ್.25:- ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಆಗಸ್ಟ್.31 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುತ್ತಾರೆ.

ಅವರು ಆಗಸ್ಟ್.31 ರಂದು ಬೆಳಿಗ್ಗೆ 9 ಗಂಟೆಯಿಂದ ಬೀದರ ಜಿಲ್ಲಾ ವ್ಯಾಪ್ತಿಯ ಭಾರಿ ಮಳೆಯಿಂದ ಅತಿವೃಷ್ಟಿ ಪ್ರದೇಶಗಳಾದ ಸಂಗನಳ್ಳಿ, ಇಸ್ಲಾಂಪೂರ, ಇಮಾಮ್‍ಬಾದ್ ಹಳ್ಳಿ, ಮಾಲೆಗಾಂವ್, ಕಪಲಾಪೂರ, ಅಲಮಸ್‍ಪುರ, ಜಾಂಪಡ, ಅಲ್ಲಾಪೂರ ಹಾಗೂ ನೇಮತಾಬಾದ ಸ್ಥಳಗಳಿಗೆ ಭೇಟಿ ಹಾಗೂ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology