Home » ಲೈವ್ ನ್ಯೂಸ್ » ದೀನ್ ದಯಾಳ್ ಸ್ಪರ್ಶ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ದೀನ್ ದಯಾಳ್ ಸ್ಪರ್ಶ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಬೀದರ.28.ಅಗಸ್ಟ್.25:- ಭಾರತೀಯ ಅಂಚೆ ಇಲಾಖೆಯು ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣೆ ಉತ್ತೇಜಿಸಲು ‘ದೀನ್ ದಯಾಳ್ ಸ್ಪರ್ಶ್ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡುವುದಕ್ಕಾಗಿ 6 ನೇ ತರಗತಿಯಿಂದ 9 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಶ್ ಎಂದರೆ ಅಂಚೆ ಚೀಟಿಗಳಲ್ಲಿರುವ ಆಸಕ್ತಿ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ವಿದ್ಯಾರ್ಥಿ ವೇತನ. ಯೋಜನೆಯ ಉದ್ದೇಶ ಯುವ ಪೀಳಿಗೆಯಲ್ಲಿ ಅಂಚೆ ಚೀಟಿಗಳ ಸಂಗ್ರಹಣೆಯನ್ನು ಉತ್ತೇಜಿಸುವುದು ಮತ್ತು ಇದನ್ನು ಸುಸ್ಥಿರ ರೀತಿಯಲ್ಲಿ ಅಕಾಡೆಮಿಕ್ ಪಠ್ಯಕ್ರಮಕ್ಕೆ ಸೇರಿಸುವುದು ಈ ಹವ್ಯಾಸವು ಮಕ್ಕಳಿಗೆ ಆರಾಮ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಈ ಯೋಜನೆಯಡಿ, 2023-24 ಶೈಕ್ಷಣಿಕ ವರ್ಷದಲ್ಲಿ ಶೇ.60 ಅಂಕ ಗಳಿಸಿರುವ ಮತ್ತು ಅಂಚೆ ಚೀಟಿ ಸಂಗ್ರಹಣೆ ಕ್ಲಬ್ ಅಥವಾ ಹವ್ಯಾಸವಾಗಿ ಅಂಚೆ ಚೀಟಿ ಸಂಗ್ರಹಣೆಯಲ್ಲಿ ತಡಗಿರುವ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 6 ಸಾವಿರ ವಿದ್ಯಾರ್ಥಿ ವೇತನ  ನೀಡಲಾಗುತ್ತದೆ.  ಆಯ್ಕೆಯು ಅಂಚೆ ಚೀಟಿ ಸಂಗ್ರಹಣೆ ರಸಪ್ರಶ್ನೆ ಆಧಾರದ ಮೇಲೆ ಮಾಡಲಾಗುತ್ತದೆ. ಅಂಚೆ ಇಲಾಖೆಯು ಯಶಸ್ವಿಯಾಗಿ ಮಾಡಿದ ಅಂಚೆ ಚೀಟಿ ಸಂಗ್ರಹಣೆ ಪ್ರಾಜೆಕ್ಟ್‍ನಲ್ಲಿ ಶಾರ್ಟ್‍ಲಿಸ್ಟ್ ಆದ ವಿದ್ಯಾರ್ಥಿಗಳು ಸ್ಪರ್ಧಿಸಬೇಕಾಗುತ್ತದೆ.

ಲೆವೆಲ್-1 ಫಿಲಟೆಲಿಕ್ ರಸಪ್ರಶ್ನೆಗೆ ಭಾಗವಹಿಸಲು ಕೊನೆಯ ದಿನಾಂಕ: 05-09-2025 ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಭಾಗವಹಿಸಲು ಪೆÇ್ರೀತ್ಸಾಹಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ www.indiapost.gov.in    ಮತ್ತು www.karnatakapost.gov.in.ಗೆ ಭೇಟಿ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology