Home » ಲೈವ್ ನ್ಯೂಸ್ » ಕಾಡವಾದ: ಶಾಶ್ವತ ಲೋಕ ಅದಾಲತನ ಮಹತ್ವ ಕುರಿತು ಕಾನೂನು ಅರಿವು ನೆರವು

ಕಾಡವಾದ: ಶಾಶ್ವತ ಲೋಕ ಅದಾಲತನ ಮಹತ್ವ ಕುರಿತು ಕಾನೂನು ಅರಿವು ನೆರವು

ಬೀದರ.07.ಆಗಸ್ಟ್.25:- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಬೀದರ ಮತ್ತು ಬೀದರ ತಾಲೂಕ ಪಂಚಾಯತ, ಕಾಡವಾದ ಗ್ರಾಮ ಪಂಚಾಯತ ಅವರುಗಳ ಸಂಯುಕ್ತಾಶ್ರಯದಲ್ಲಿoದು ಕಾಡವಾದ ಗ್ರಾಮ ಪಂಚಾಯತದಲ್ಲಿ ಹಮ್ಮಿಕೊಂಡಿದ್ದ ಶಾಶ್ವತ ಲೋಕ ಅದಾಲತನ ಮಹತ್ವ ಮತ್ತು ಅದರ ಕಾರ್ಯವೈಖರಿ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಕ್ಕೆ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೋಡೆ ಅವರು ಉದ್ಘಾಟಿಸಿ ಶಾಶ್ವತ ಲೋಕ ಅದಾಲತ್ನ ಮಹತ್ವ ಮತ್ತು ಅದರ ಕಾರ್ಯವೈಖರಿ ಬಗ್ಗೆ ಮಾತನಾಡಿದರು.

ನಂತರ ಅಲ್ಲಿನ ಕಾಡವಾದ ಸರ್ಕಾರಿ ಹಿರಿಯ ಪ್ರಾಧಮಿಕ ಶಾಲೆಗೆ ಭೇಟಿ ನೀಡಿ ಶಾಲೆಯನ್ನು ವಿಕ್ಷಣೆ ಮಾಡಿದ್ದರು.
ಈ ಸಂದರ್ಭದಲ್ಲಿ ಬೀದರ ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಬಜರಂಗ ಪಿ.ಖಾಶೆಂಪೂರ ವಕೀಲ ಅಬ್ದುಲ್ ಹಫೀಜ್, ಕಾಡವಾದ ಗ್ರಾಮ ಪಂಚಾಯತ ಪಿಡಿಓ ಶಿವಕುಮಾರ ಪಾಟೀಲ, ವಕೀಲ ಮನಮಥ ಸೇರಿದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾಡವಾದ ಗ್ರಾಮ ಪಂಚಾಯತ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.

Author

ಪ್ರಮುಖ ಸುದ್ದಿ

Stock market

Astrology