Home » ಲೈವ್ ನ್ಯೂಸ್ » ಮಾಜಿ ಸೈನಿಕರಿಗೆ, ಹಿರಿಯ ನಾಗರಿಕರಿಗೆ ಒಂದು ದಿವಸದ ಆರೋಗ್ಯಕರ ಹಾಗೂ ಸುಖಕರ ಜೀವನದ ವಿಷಯ ಕುರಿತು ಉಪನ್ಯಾಸ

ಮಾಜಿ ಸೈನಿಕರಿಗೆ, ಹಿರಿಯ ನಾಗರಿಕರಿಗೆ ಒಂದು ದಿವಸದ ಆರೋಗ್ಯಕರ ಹಾಗೂ ಸುಖಕರ ಜೀವನದ ವಿಷಯ ಕುರಿತು ಉಪನ್ಯಾಸ

ಬೀದರ.16.ಜುಲೈ.25:- ಬೀದರ್ ಜಿಲ್ಲೆಯ ಎಲ್ಲಾ ಮಾಜಿ ಸೈನಿಕರಿಗೆ, ಹಿರಿಯ ನಾಗರಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ” ಒಂದು ದಿವಸದ ಆರೋಗ್ಯಕರ ಹಾಗೂ ಸುಖಕರ ಜೀವನದ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಮುಂಬೈನ ಸುಪ್ರಸಿದ್ಧ ಹಾಗು ಅನುಭವಿ ವೈದ್ಯರಾದ ಬಿ.ಕೆ. ಡಾ|| ಸಚಿನ್ ಪರಬ (MBBS, MBA, M.Sc, PDCR) ಅವರು  ಜುಲೈ  16 ರಂದು ಬೆಳಗ್ಗೆ 10 ಗಂಟೆಗೆ   ನಗರದ ಬ್ರಹ್ಮಕುಮಾರಿಸ ಪಾವನಧಾಮ ಜೆಪಿ ನಗರ ಜನವಾಡ ರಸ್ತೆ  ಬೀದರ್ನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಸೈನಿಕರು ಮತ್ತು ಹಿರಿಯ ನಾಗರಿಕರು ಈ ಕಾರ್ಯಕ್ರಮದಲ್ಲಿ  ಭಾಗವಹಿಸಿ ಎಲ್ಲಾ ಮಾಜಿ ಸೈನಿಕರಿಗೂ ಹಾಗೂ ಹಿರಿಯ ನಾಗರಿಕರು ಮತ್ತು ಅವರ ಕುಟುಂಬಸ್ಥರಿಗೆ ದಿನನಿತ್ಯದ ಜೀವನದ  ಹಾಗೂ ತಮ್ಮಆರೋಗ್ಯದ ಬಗ್ಗೆ ತಮ್ಮನ್ನು ಉದ್ದೇಶಿಸಿ ಮಾತನಾಡಲಿದ್ದಾರೆ  ಈ ಕಾರ್ಯಕ್ರಮದಲ್ಲಿ ಭಾಗ ವಹಿಸುವ ವೀರನಾರಿಯರು ಹಾಗೂ ಕಾರ್ಗಿಲ್ ಮತ್ತು ಆಪರೇಷನ್ ಸಿಂಧೂರಿನಲ್ಲಿ ಭಾಗವಹಿಸಿದ ಮಾಜಿ ಸೈನಿಕರಿಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅಶೋಕ್ ಕುಮಾರ್ ಕಾರಂಜಿ  ಮಾಜಿ ಅಧ್ಯಕ್ಷರು ಮಾಜಿ ಸೈನಿಕ ಸಂಘ ಬೀದರ್  ಅವರು ಪತ್ರಿಕಾ ಪ್ರಕಟಣೆಯಲ್ಲಿ   ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology