Home » ಲೈವ್ ನ್ಯೂಸ್ » ಲಿಂಗಾಯತರು ಒಗ್ಗಟ್ಟಾಗದಿದ್ದರೆ ಜಿಲ್ಲೆಯಲ್ಲಿ
ಲಿಂಗಾಯತ ಸಮಾಜಕ್ಕೆ ಉಳಿಗಾಲವಿಲ್ಲ -ರಾಜಶೇಖರ ಜವಳೆ

ಲಿಂಗಾಯತರು ಒಗ್ಗಟ್ಟಾಗದಿದ್ದರೆ ಜಿಲ್ಲೆಯಲ್ಲಿ
ಲಿಂಗಾಯತ ಸಮಾಜಕ್ಕೆ ಉಳಿಗಾಲವಿಲ್ಲ -ರಾಜಶೇಖರ ಜವಳೆ

ಬೀದರ.16.ಜುಲೈ .25:- ಬೀದರ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮಾಜ ಎಲ್ಲಾ ರಾಜಕೀಯ ಪಕ್ಷದಲ್ಲಿ ಹಂಚಿ ಹೋಗಿರುವುದರಿಂದ ಸಮಾಜದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಂಘಟನೆ ಇಲ್ಲದಂತಾಗಿದೆ. ಇದರಿಂದಾಗಿ ಸಮಾಜದ ಸಂಘಟನೆಯಲ್ಲಿ ಮತ್ತು ಸಮಸ್ಯೆಗಳು ಬಗೆಹರಿಸುವಲ್ಲಿ ಒಗ್ಗಟ್ಟು ಇಲ್ಲದಂತಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾದ ಮುಖಂಡರಾದ ರಾಜಶೇಖರ ಜವಳೆಯವರು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.


ಬೀದರ ಜಿಲ್ಲೆಯಲ್ಲಿ ಸಾಕಷ್ಟು ಲಿಂಗಾಯತ ಪ್ರಭಾವಿ ರಾಜಕಾರಣ ಗಳಿದ್ದರೂ ಇಲ್ಲಿಯವರೆಗೆ ವೀರಶೈವ  ಲಿಂಗಾಯತ ಭವನ ನಿರ್ಮಾಣವಾಗದೇ ಇರುವುದು ದುರದೃಷ್ಟಕರವಾದ ಸಂಗತಿಯಾಗಿದೆ. ಹೀಗಾಗಿ ಸಮಾಜದಲ್ಲಿ ಸಂಘಟನೆ ಇಲ್ಲವೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ.


ಮುಂಬರುವ ದಿನಗಳಲ್ಲಿ ವೀರಶೈವ ಲಿಂಗಾಯತರು ಒಗ್ಗಟ್ಟು ತೋರಿಸಿ ವೀರಶೈವ ಲಿಂಗಾಯತ ಭವನ ನಿರ್ಮಾಣ ಮಾಡುವಲ್ಲಿ ಹಾಗೂ ಸಮಾಜದ ಏಳಿಗೆಗಾಗಿ ಎಲ್ಲಾ ರಾಜಕೀಯ ಲಿಂಗಾಯತ ಮುಖಂಡರು ಶ್ರಮಿಸಬೇಕೆಂದು ಜವಳೆ ತಿಳಿಸಿದ್ದಾರೆ. ಒಂದು ವೇಳೆ ವೀರಶೈವ ಲಿಂಗಾಯತರು ಒಗ್ಗಟ್ಟಾಗದಿದ್ದರೆ ಜಿಲ್ಲೆಯಲ್ಲಿ ಲಿಂಗಾಯತ ಸಮಾಜಕ್ಕೆ ಉಳಿಗಾಲವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology