Home » ಲೈವ್ ನ್ಯೂಸ್ » ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ: ಪ್ರವೇಶಕ್ಕೆ ಅರ್ಜಿ ಆಹ್ವಾನ

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ: ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೊಪ್ಪಳ.05.ಜುಲೈ .25: ತಳಕಲ್, ಕುಕನೂರು ಮತ್ತು ಮುಧೋಳ ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನಲ್ಲಿ ಬಹು ಬೇಡಿಕೆ ಇರುವ ವಿವಿಧ ವೃತ್ತಿಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಂಸ್ಥೆಗಳಲ್ಲಿ ವಿದ್ಯುತ್ ಶಿಲ್ಪಿ, ವಿದ್ಯುನ್ಮಾನ ದುರಸ್ತಿಗಾರ, ಜೋಡಣೆಗಾರ, ಉದ್ಯೋಗ ಯೋಜನೆ ಅಡಿಯಲ್ಲಿ ಸಿ.ಎನ್.ಸಿ. ಮಷನಿಂಗ್ ಟೆಕ್ನಿಷಿಯನ್, ಮೆಕ್ಯಾನಿಕ್ ಎಲೆಕ್ಟಿçಕಲ್ ವೆಹಿಕಲ್, ವರ್ಚುವಲ್ ಅನಲೈಸಸ್ ಮತ್ತು ಡಿಸೈನರ್, ಇಂಜಿನಿಯರ್ ಡಿಸೈನ್ ಟೆಕ್ನೆಷಿಯನ್, ಮ್ಯಾನುಫೆಕ್ಚರಿಂಗ್  ಪ್ರೊಸೆಸ್  ಕಂಟ್ರೋಲ್ ಮತ್ತು ಆಟೋಮೆಷನ್, ಇಂಡಸ್ಟಿçಯಲ್ ರೋಬೋಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫೆಕ್ಚರಿಂಗ್ ಸೀಟುಗಳು  ಹಾಗೂ (ಪಿ.ಪಿ.ಪಿ)ಅಡಿಯಲ್ಲಿ ಪ್ರತಿಯೊಂದು ವೃತ್ತಿಯಲ್ಲಿ ಸೀಟುಗಳು ಲಭ್ಯವಿರುತ್ತವೆ.

ಮೇಲೆ ಕಾಣಿಸಿದ ವೃತ್ತಿಗಳ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಆಗಸ್ಟ್ 30 ರೊಳಗೆ ಸಂಸ್ಥೆಗಳಿಗೆ ಮೂಲ ದಾಖಲಾತಿಗಳೊಂದಿಗೆ ಖುದ್ದು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ತಳಕಲ್, ಕುಕನೂರು ಮತ್ತು ಮುಧೋಳ, ಮೊ.ಸಂ: 9740358208 ಕ್ಕೆ ಸಂಪರ್ಕಿಸಬಹುದು ಎಂದು ತಳಕಲ್‌ನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Author

ಪ್ರಮುಖ ಸುದ್ದಿ

Stock market

Astrology