Home » ಕೊಪ್ಪಳ » ಅಪರಿಚಿತ ಶವದ ವಾರಸುದಾರರ ಪತ್ತೆಗೆ ಮನವಿ

ಅಪರಿಚಿತ ಶವದ ವಾರಸುದಾರರ ಪತ್ತೆಗೆ ಮನವಿ

ಕೊಪ್ಪಳ ಜುಲೈ.25: ಕೊಪ್ಪಳದ ಹಿಟ್ನಾಳ ಟೋಲ್ ಕುಷ್ಟಗಿ ಕಡೆ ಹೋಗುವ ಎನ್.ಹೆಚ್.63 ರಸ್ತೆಯ ಪಕ್ಕದ ಡಿವೈಡರ್ ಹತ್ತಿರ ಮೇ 02 ರಂದು ಸುಮಾರು 55 ರಿಂದ 60 ವರ್ಷದ ಅಪರಿಚಿತ ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಮೃತ ಪಟ್ಟಿದ್ದು, ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 28/2025 ಕಲಂ: 194 ಬಿ.ಎನ್.ಎಸ್.ಎಸ್. 2023 ಅಡಿ ಪ್ರಕರಣ ದಾಖಲಾಗಿದೆ.


ಮೃತ ವ್ಯಕ್ತಿಯ ಚಹರೆ: ಮೃತ ವ್ಯಕ್ತಿಯು ಮೈಮೇಲೆ ಹಳದಿ ಬಿಳಿ ಬಣ್ಣದ ಚೆಕ್ಸ್ ಶರ್ಟ್ ಇದ್ದು, ವ್ಯಕ್ತಿಯು ನೀಲಿ ಬಿಳಿ ಬೆಡ್ ಶೀಟ್ ಹೊದ್ದುಕೊಂಡಿರುತ್ತಾನೆ. ನಗರದ ಜಿಲ್ಲಾಸ್ಪತ್ರೆಯ ಶೈತ್ಯಾಗಾರದಲ್ಲಿ ಶವವನ್ನು ಇರಿಸಲಾಗಿದೆ.


ಮೃತ ವ್ಯಕ್ತಿಯ ಚಹರೆ ಪಟ್ಟಿಗೆ ಹೋಲಿಕೆಯಾಗುವಂತಹ ವ್ಯಕ್ತಿ ಕಾಣೆಯಾಗಿದ್ದಲ್ಲಿ ಸಂಬoಧಿಕರು ಹಾಗೂ ವಾರಸುದಾರರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕೊಪ್ಪಳ ಎಸ್.ಪಿ ದೂ.ಸಂಖ್ಯೆ: 08539-230111, ಕೊಪ್ಪಳ ಉಪ ವಿಭಾಗದ ಡಿ.ಎಸ್ಪಿ ಮೊ.ಸಂಖ್ಯೆ: 08539-222433, ಕೊಪ್ಪಳ ಗ್ರಾಮೀಣ ವೃತ್ತದ ಸಿ.ಪಿ.ಐ. ದೂ.ಸಂಖ್ಯೆ: 08539-221333, ಹಾಗೂ ಮುನಿರಾಬಾದ ಪೋಲೀಸ್ ಠಾಣೆಯ ಪಿ.ಎಸ್.ಐ ಮೊ.ಸಂಖ್ಯೆ: 08539-270333 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಮುನಿರಬಾದ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.

Author

ಪ್ರಮುಖ ಸುದ್ದಿ

Stock market

Astrology