Home » ಲೈವ್ ನ್ಯೂಸ್ » ಭಾಗ್ಯನಗರ ಪ.ಪಂ.: ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನ

ಭಾಗ್ಯನಗರ ಪ.ಪಂ.: ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನ

ಕೊಪ್ಪಳ.03.ಜುಲೈ.25: ಭಾಗ್ಯನಗರ ಪಟ್ಟಣ ಪಂಚಾಯತಿಯ 2022-23ನೇ ಸಾಲಿನ ಶೇ.24.10 ರ ಯೋಜನೆಯ ಎಸ್.ಎಫ್.ಸಿ ಮುಕ್ತನಿಧಿ ಶೇ.5 ರ ಯೋಜನೆಯಡಿ ವ್ಯಕ್ತಿಗತ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ವಿದ್ಯುತ್ ಚಾಲಿತ ವ್ಹೀಲ್ ಚೇರ್ ಖರೀದಿಸಿ ಒದಗಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಫಲಾನುಭವಿಗಳು ಕಡ್ಡಾಯವಾಗಿ 5 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಪಟ್ಟಣದಲ್ಲಿ ವಾಸವಾಗಿರಬೇಕು. ಚಾಲ್ತಿ ಸಾಲಿನ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಕುಟುಂಬದ ಪಡಿತರ ಚೀಟಿ, ಯುಡಿಐಡಿ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ 2 ಭಾವಚಿತ್ರಗಳು ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಸೌಲಭ್ಯ ಪಡೆಯದಿರುವ ಬಗ್ಗೆ ಪ್ರಮಾಣ ಪತ್ರಗಳೊಂದಿಗೆ ನಿಗದಿತ ನಮೂನೆಯಲ್ಲಿ ಜುಲೈ 15 ರೊಳಗೆ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology