Home » ಲೈವ್ ನ್ಯೂಸ್ » ರಾಜ್ಯದ 14. IAS ಅಧಿಕಾರಿಗಳ ವರ್ಗಾವಣೆ. ರಾಜ್ಯ ಸರ್ಕಾರ ಆದೇಶ.

ರಾಜ್ಯದ 14. IAS ಅಧಿಕಾರಿಗಳ ವರ್ಗಾವಣೆ. ರಾಜ್ಯ ಸರ್ಕಾರ ಆದೇಶ.

ಬೆಂಗಳೂರು.09.ಜುಲೈ.25:-ರಾಜ್ಯ ಸರ್ಕಾರ ಇಂದು ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿ ಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಇಬ್ಬರು ಜಿಲ್ಲಾಧಿಕಾರಿಗಳು ಸೇರಿದಂತೆ ಒಟ್ಟು 14 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ವಿಜಯನಗರದ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭೂಬಾಲನ್‌ ಟಿ ಹಾಗೂ ಯಾದಗಿರಿ ಜಿಲ್ಲಾಧಿಕಾರಿ ಸುಶೀಲ ಬಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಭೂಬಾಲನ್‌ ಟಿ ಅವರನ್ನು ಇ ಆಡಳಿತ ಇಲಾಖೆಯ ಇ ಆಡಳಿತ ಕೇಂದ್ರದ ಸಿಇಒ ಆಗಿ ವರ್ಗಾವಣೆ ಮಾಡಲಾಗಿದ್ದು, ಸುಶೀಲ ಬಿ ಅವರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹುದ್ದಗೆ ವರ್ಗಾಯಿಸಲಾಗಿದೆ.

ವಿಜಯನಗರ ಜಿಲ್ಲೆಗೆ ದಕ್ಷಿಣ ಕನ್ನಡ ಪಂಚಾಯತ್‌ ಸಿಇಒ ಆನಂದ್‌ ಕೆ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದ್ದು, ಅಟಲ್‌ ಜನಸ್ನೇಹಿ ಕೇಂದ್ರದ ಎಂಡಿ ಭೂಯಲ್‌ ಹರ್ಷ ನಾರಾಯಣ ರಾವ್‌ ಅವರನ್ನು ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.

ಉಳಿದ ಐಎಎಸ್‌ ಅಧಿಕಾರಿಗಳನ್ನು ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂಬ ವಿವರ ಮುಂದಿದೆ
ಜಹೀರಾ ನಸೀಮ್‌ – ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು
ಪಂಡ್ವೆ ರಾಹುಲ್‌ ತುಕಾರಾಮ್‌ – ಕಲಬುರಗಿ ಪಬ್ಲಿಕ್‌ ಇನ್ಸ್ಟ್ರಕ್ಷನ್‌ ಹೆಚ್ಚುವರಿ ಆಯುಕ್ತ
ದಿಲೀಶ್‌ ಸಸಿ – ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ ಸಿಇಒ
ಈಶ್ವರ್‌ ಕುಮಾರ್‌ – ರಾಯಚೂರು ಜಿಲ್ಲಾ ಪಂಚಾಯತ್‌ ಸಿಇಒ
ಶಿಶಿಧರ್‌ ಕುರೇರಾ – ಕೆಯುಐಡಿಎಫ್‌ಸಿ ಜಂಟಿ ವ್ಯವಸ್ಥಾಪಕ ನಿರ್ದೇಶಕ
ಡಾ. ಆಕಾಶ್‌ ಎಸ್‌ – ಬಾಗಲಕೋಟೆ ಜಿಲ್ಲಾ ಪಂಚಾಯತ್‌ ಸಿಇಒ
ಅಪರ್ಣಾ ರಮೇಶ್‌ – ಇಡಿಸಿಎಸ್‌ ನಿರ್ದೇಶಕರು
ನರ್ವಾಡೆ ವಿನಾಯಕ್‌ ಕರ್ಬಾರಿ – ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಿಇಒ
ಯತೀಶ್‌ ಆರ್‌ – ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ ಸಿಇಒ

Author

ಪ್ರಮುಖ ಸುದ್ದಿ

Stock market

Astrology