Home » ಲೈವ್ ನ್ಯೂಸ್ » ೩೭ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ೨೦೨೫ರ ಕಾರ್ಯಕ್ರಮವನ್ನು

೩೭ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ೨೦೨೫ರ ಕಾರ್ಯಕ್ರಮವನ್ನು

ಬೀದರ್.05.ಜನವರಿ.25: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ, ಜಿಲ್ಲಾಡಳಿತ ಬೀದರ, ಜಿಲ್ಲಾ ಪೊಲೀಸ್ ಇಲಾಖೆ ಬೀದರ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಬೀದರ, ಸಾರ್ವಜನಿಕ ಶಿಕ್ಷಣ ಇಲಾಖೆ ಬೀದರ, ಮೋಟಾರು ವಾಹನಗಳ ತರಬೇತಿ ಶಾಲೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ೩೭ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ೨೦೨೫ರ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ಎಸಿ.ಬಿ. ರೆಹಮಾನ ಅವರು ನಗರದ ನ್ಯಾಯಾಲಯದ ಆವರಣದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿ ಅರ್ಧ, ಒಂದು ಕಿಮೀ ಹೋಗಲು ಸಹ ಇಂದು ನಾವು ಬೈಕ, ವಾಹನಗಳನ್ನು ಬಳಕೆ ಮಾಡುತ್ತಿದೆವೆ. ಅದರ ಬದಲು ಕಾಲ್ನಡಿಗೆಗೆ ಒತ್ತು ನೀಡಬೇಕು. ಇಂದು ಹಳ್ಳಿ ಹಳ್ಳಿಗಳಿಗೂ ಕಾರು ಬೈಕು ಬಂದಿವೆ. ಮನೆಯ ಪ್ರತಿಯೊಬ್ಬರ ಬಳಿ ಒಂದೊoದು ಬೈಕ ವಾಹನಗಳಿವೆ. ಆದ್ದರಿಂದ ಜನತೆ ಮನೆಯಿಂದ ಹೊರಗೆ ಬರಲು ಸಹ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ವಾಹನ ಚಲಾಯಿಸುವಾಗ ಸುರಕ್ಷತೆಗೆ ಆದ್ಯತೆ ನೀಡಬೇಕು.

ನಿತ್ಯ ಎಲ್ಲೆಡೆ ನಡೆಯುವ ರಸ್ತೆ ಅಪಘಾತದಿಂದ ಸಾಕಷ್ಟು ಜನ ಸಾಯುತ್ತಿದ್ದಾರೆ. ಆದಷ್ಟು ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಬೈಕ್ ಸವಾರರು ಕಡ್ಡಾಯ ಹೆಲ್ಮೆಟ್ ಧರಿಸಬೇಕು. ಪೊಲೀಸರು ನೋಡುತ್ತಾರೆ ಎಂಬ ಕಾರಣಕ್ಕೆ ಹೆಲ್ಮೇಟ್ ಧರಿಸುವ ಬದಲು ಜೀವ ಉಳಿಸಿಕೊಳ್ಳಲು ಬಳಸಬೇಕೆಂದರು. ಅಪಘಾತ ಆಕಸ್ಮಿಕ, ಇದರಿಂದ ಪಾರಾಗಲು ಹೆಲ್ಮೇಟ್ – ಸೀಟ ಬೆಲ್ಟ ಬಳಕೆ ಅಗತ್ಯ ಎಂದು ಪ್ರತಿಪಾದನೆ ಮಾಡಿದರು. ರಸ್ತೆಯ ಮೇಲೆ ವಾಹನಗಳನ್ನು ಬಳಸುವ ಎಲ್ಲರೂ ಹೆಲ್ಮೇಟ್ ಧರಿಸಿ ಸೀಟ್ ಬೆಲ್ಟ್ ಹಾಕಿ ಕಾನೂನೂ ಪಾಲನೆ ಮಾಡುವುದರಿಂದ ಮುಂದೆ ಆಗುವ ಸಾವು ನೋವು ತಡೆಯಬಹುದು. ರಸ್ತೆ ಸುರಕ್ಷತೆ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕೆಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಕೆ. ಬಿರಾದಾರ ಮಾತನಾಡಿ ಅಪಘಾತಗಳನ್ನು ಕಡಿಮೆ ಮಾಡುವುದೇ ನಮ್ಮ ಈ ಕಾರ್ಯಕ್ರಮದ ಉದ್ದೇಶವಾಗಿದೆ ದೇಶದಲ್ಲಿ ಪ್ರತಿ ವರ್ಷ ಅಪಘಾತದಲ್ಲಿ ೧ ಲಕ್ಷ ೫೦ ಸಾವಿರ ಜನರು ಸಾಯುತ್ತಿದ್ದಾರೆ.

ಪ್ರತಿ ದಿನ ೪೦೦ ಜನರು ಸಾಯುತ್ತಿದ್ದಾರೆ. ವರ್ಷಕ್ಕೆ ೧೦ ಲಕ್ಷ ಜನ ಗಾಯಾಳುಗಳಾಗುತ್ತಿದ್ದಾರೆ ಆದ್ದರಿಂದ ರಸ್ತೆ ನಿಯಮ ಪಾಲನೆಮಾಡಿದರೆ ಅಪಘಾತ ತಡೆದು ಜೀವ ಉಳಿಯುವುದು ಎಂದರು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೋಡೆ ಮಾತನಾಡಿ ರಸ್ತೆಅಪಘಾತಗಳನ್ನು ತಡೆಯಬೇಕಿದೆ ಇಂದು ಯುವಕರೇ ಹೆಚ್ಚು ರಸ್ತೆ ಅಪಘಾತದಿಂದ ಸಾಯುತ್ತಿದ್ದಾರೆ ಹೀಗಾಗಿ ರಸ್ತೆ ಸುರಕ್ಷತಾ ನಿಯಮ ಅರಿತು ಜನತೆ  ಬೈಕ್ ವಾಹನ ಚಲಾಯಿಸಬೇಕು ಎಂದು ಸಲಹೆ ಮಾಡಿದರು
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶನ್ಮುಕಯ್ಯ ಸ್ವಾಮಿಮಾತನಾಢಿದರು. ಮೋಟಾರುವಾಹನ ನಿರೀಕ್ಷಕ ಹುಸೇನ್ ಸಾಬ್ ನದಾಫ್. ಸಾರಿಗೆ ಕಚೇರಿ ಅಧೀಕ್ಷಕ ಮಲ್ಲಿಕಾರ್ಜುನ ಎಂ. ರಾಜ್ಯ ವಾಹನ ತರಬೇತಿ ಶಾಲೆಯ ಸಂಘಟನಾ ಕಾರ್ಯದರ್ಶಿ ಶಿವರಾಜ ಜಮಾದಾರ.

ಜಿಲ್ಲಾ ಮೋಟಾರು ವಾಹನ ತರಬೇತಿ ಶಾಲೆ ಸಂಘದ ಅಧ್ಯಕ್ಷ ಪ್ರಕಾಶ್ ಗುಮ್ಮೆ. ಆಕಾಶ ಸಜ್ಜನ. ವಿಕಾಸ ಕಾಂಬಳೆ. ಅಂಬಿಕಾ. ಹಾಗೂ ಆಟೋ ಚಾಲಕರು, ನ್ಯಾಯಾಲಯದ ಮತ್ತು ಸಾರಿಗೆ ಇಲಾಖೆಯ ಸಿಬ್ಬಂದಿ ಇದ್ದರು. ಇದೇ ವೇಳೆ ನ್ಯಾಯಾಧೀಶರಿಂದರಸ್ತೆ ಸುರಕ್ಷತೆ ಕುರಿತ ಕರ ಪತ್ರ ಬಿಡುಗಡೆ ಮಾಡಲಾಯಿತು.

Author

ಪ್ರಮುಖ ಸುದ್ದಿ

Stock market

Astrology