Home » ಲೈವ್ ನ್ಯೂಸ್ » ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ ಸಚಿವ ರಹೀಂ ಖಾನ್

ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ ಸಚಿವ ರಹೀಂ ಖಾನ್

ಬೀದರ.14.ಸೆಪ್ಟೆಂಬರ.25:- ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರು ಇತ್ತೀಚೆಗೆ ಮೈಲೂರಿನ ಒಂದೇ ಕುಟುಂಬದ ಆರು ಸದಸ್ಯರು ಸಾಲಬಾಧೆಯಿಂದ ಆತ್ಮಹತ್ಯೆಗೆ ಮಾಡಿಕೊಂಡ ಮೃತರ ಕುಟುಂಬವನ್ನು ಭೇಟಿ ಮಾಡಿ, ಅವರಿಗೆ ಸಾಂತ್ವನ ಹೇಳಿ, ವೈಯಕ್ತಿಕ 1 ಲಕ್ಷ ರೂಪಾಯಿ ಸಹಾಯವನ್ನು ನೀಡಿದರು. ಬದುಕುಳಿದ ಮಗುವಿಗೆ ಉಚಿತ ಶಿಕ್ಷಣವನ್ನು ನೀಡುವುದಾಗಿಯೂ ಅವರು ಭರವಸೆ ನೀಡಿದರು.

ಬೀದರ್ ತಾಲ್ಲೂಕಿನ ಮೈಲೂರು ನಿವಾಸಿಗಳಾದ ಶಿವಮೂರ್ತಿ ಕುಟುಂಬದ ಆರು ಸದಸ್ಯರು ಸಾಲಬಾಧೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದು ತುಂಬಾ ದುಃಖಕರ. ದುರಂತವೆoದರೆ, ಮೂವರು ಮಕ್ಕಳು ಮತ್ತು ಅವರ ತಂದೆ ಪ್ರಾಣ ಕಳೆದುಕೊಂಡರು. ಅದೃಷ್ಟವಶಾತ್, ತಾಯಿ ಮತ್ತು ಒಬ್ಬ ಮಗ ಬದುಕುಳಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಶೌಕತ್ ಅಲಿ, ಶ್ರೀಮಂತ್, ಪ್ರಶಾಂತ್ ಭಾವಿಕಟ್ಟಿ, ಜಾಫರ್ ಭಾಯ್, ದಸ್ರತ್, ರಾಜ್‌ಕುಮಾರ್ ಭಾವಿಕಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.

Author

ಪ್ರಮುಖ ಸುದ್ದಿ

Stock market

Astrology