Home » ಲೈವ್ ನ್ಯೂಸ್ » ಸರ್ಕಾರಿ ಕಾರ್ಯಾಲಯದ ಕಂಪ್ಯೂಟರ್ ಆಪರೇಟರ್ ‘ಲೋಕಾ’ ಬಲೆಗೆ

ಸರ್ಕಾರಿ ಕಾರ್ಯಾಲಯದ ಕಂಪ್ಯೂಟರ್ ಆಪರೇಟರ್ ‘ಲೋಕಾ’ ಬಲೆಗೆ

ಕಲಬುರಗಿ.23.ಏಪ್ರಿಲ್.26: ವಸತಿ ಯೋಜನೆಯಡಿ ಮಂಜೂರಾದ ಮನೆಯಸಹಾಯಧನ ಬಿಡುಗಡೆಗಾಗಿ ಲಂಚಕ್ಕೆ ಬೇಡಿಕೆಯಿಟ್ಟ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತರ ಪೊಲೀಸರ ‘ಬಲೆ’ಗೆ ಬಿದ್ದಿದ್ದಾನೆ.

ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಳ್ಳಿ ಗ್ರಾಮ ಪಂಚಾಯಿತಿಯ ಬಂದೇನವಾಜ್ ‘ಲೋಕಾ’ ಬಲೆಗೆ ಬಿದ್ದ ಆರೋಪಿ.

“ನನ್ನ ಅಣ್ಣನಿಗೆ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರಾಗಿತ್ತು. ಅದರ ಸಹಾಯಧನ ಮಂಜೂರಿಗೆ ಬಂದೇನವಾಜ್ ₹ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ₹10 ಸಾವಿರಕ್ಕೆ ಡೀಲ್ ಮುಗಿಸಿ, ₹5 ಸಾವಿರ ನಗದು ರೂಪದಲ್ಲಿ ತೆಗೆದುಕೊಂಡಿದ್ದಾನೆ. ₹3 ಸಾವಿರ ಫೋನ್ ಪೇ ಮೂಲಕ ಪಡೆದಿದ್ದಾನೆ’ ಎಂದು ಮಳ್ಳಿ ಗ್ರಾಮದ ಮಲ್ಲಿಕಾರ್ಜುನ ಎಂಬುವವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಅದರಂತೆ ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅರುಣಕುಮಾರ ಮುರಗುಂಡಿ ಅವರ ತಂಡವು ಬುಧವಾರ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.

Author

ಪ್ರಮುಖ ಸುದ್ದಿ

Stock market

Astrology