Home » ಲೈವ್ ನ್ಯೂಸ್ » ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.20.ಜೂನ್.25:-ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ನಿವಾಸಿ 55 ವರ್ಷದ ರಮೇಶ ತಂದೆ ಶರಣಪ್ಪ ಎಂಬ ವ್ಯಕ್ತಿ 2024ರ ಜುಲೈ 21 ರಿಂದ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:236/202 ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ವ್ಯಕ್ತಿಯ ಚಹರೆ:

ಕಾಣೆಯಾದ ವ್ಯಕ್ತಿಯು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈ ಬಣ್ಣ, ತಲೆಯಲ್ಲಿ ಕಪ್ಪು, ಬಿಳಿ ಮಿಶ್ರಿತ ಕೂದಲು ಹೊಂದಿದ್ದು, ಕಾಣೆಯಾದಾಗ ಬಿಳಿ ಬಣ್ಣದ ಗೆರೆಯ ಅಂಗಿ, ನೀಲಿ ಬಣ್ಣದ ಲುಂಗಿ ಧರಿಸಿದ್ದರು. ಕನ್ನಡ, ತೆಲುಗು ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.

ಮೇಲ್ಕಂಡ ಚಹರೆಯ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆ ಪಿಐ ದೂ.ಸಂ: 08533-230854, 9480803730 ಎಸ್‌ಪಿ ಕಚೇರಿ: 08539-230111 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Author

ಪ್ರಮುಖ ಸುದ್ದಿ

Stock market

Astrology