Home » ಲೈವ್ ನ್ಯೂಸ್ » ವಿಜಯಪುರ ಜಿಲ್ಲೆಯಲ್ಲಿ ಭೂಕಂಪ! ಮನೆಯಿಂದ ಹೊರಗೆ ಓಡಿದ ಜನರು

ವಿಜಯಪುರ ಜಿಲ್ಲೆಯಲ್ಲಿ ಭೂಕಂಪ! ಮನೆಯಿಂದ ಹೊರಗೆ ಓಡಿದ ಜನರು

ವಿಜಯಪುರ.11.ಅಕ್ಟೋಬರ.25:- ಶುಕ್ರವಾರ ರಾತ್ರಿ 10:01 ಕ್ಕೆ ಭೂಕಂಪನವಾಗಿದೆ., ವಿಜಯಪುರ ಗ್ರಾಮೀಣ ಭಾಗದ ಸುತ್ತಲೂ 12 ಕಿಲೋಮೀಟರ್ ವ್ಯಾಪ್ತಿಯಲ್ಲಿ  ಈ ಭೂಕಂಪ ತಿಕೋಟ ಹಾಗೂ ವಿಜಯಪುರ ತಾಲ್ಲೂಕಿನ ಹೊನ್ನೂಟಗಿ, ಕವಲಗಿ, ಕಗ್ಗೋಡ, ಮಧಬಾವಿ, ದ್ಯಾಬೇರಿ ಭಾಗಗಳಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿ ಕಂಡುಬಂದಿದೆ

ಭೂಕಂಪನ ಆಯಪ್‌ಗಳಲ್ಲಿ 2.8 ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದ್ದು, ಇಂತಹ ಘಟನೆಗಳು ಹೆಚ್ಚಾಗುತ್ತಿರುವುದರಿಂದ ಸ್ಥಳೀಯ ಜನರಲ್ಲಿ ಆತಂಕ ಉಂಟಾಗಿದ್ದು.

ಕಳೆದ ತಿಂಗಳಲ್ಲಿಯೇ ಸಿಂದಗಿ ಪಟ್ಟಣದಲ್ಲಿ ಸರಣಿ ಭೂಕಂಪನಗಳು ಸಂಭವಿಸಿದ್ದವು. ಇತ್ತೀಚೆಗೆ ನಗರ ಭಾಗದಲ್ಲಿಯೂ ಕಂಪನ ಸಂಭವಿಸಿರುವುದರಿಂದ ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಸ್ಥಳೀಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಪರಿಸ್ಥಿತಿಯನ್ನು ಗಮನಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology