Home » ಲೈವ್ ನ್ಯೂಸ್ » ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಶಿಶುಪಾಲನಾ ರಜೆ: ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಶಿಶುಪಾಲನಾ ರಜೆ: ಇಲ್ಲಿದೆ ಸಂಪೂರ್ಣ ಮಾಹಿತಿ.

ಬೆಂಗಳೂರು.09.ಜನವರಿ.26:  ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ ಮಹಿಳಾ ಶಿಕ್ಷಕರಿಗೆ ಶಿಶುಪಾಲನಾ ರಜೆಗೆ ಹೇಗೆ ಪಡೆಯಬಹುದು ಸರ್ಕಾರ ಆದೇಶ ಮತ್ತು ಸಂಪೂರ್ಣ ಮಾಹಿತಿ ಇಲ್ಲಿ.

ಮೇಲೆ ಓದಲಾದ ನಿರ್ದೇಶಕರು Teacher (ಪ್ರಾಥಮಿಕ ಶಿಕ್ಷಣ), ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಪ್ರಸ್ತಾವನೆಯಲ್ಲಿ, ಬುದ್ದಿ ಮಾಂದ್ಯ/ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮತ್ತು ನೌಕರರಿಗೆ ಶಿಶುಪಾಲನ ರಜೆಯನ್ನು ಈಗಾಗಲೇ ಸರ್ಕಾರವು ಮಂಜೂರು ಮಾಡಿದೆ.

ಹಾಗೆಯೇ 2020-21ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-37 ರಲ್ಲಿ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನ ರಜೆಯನ್ನು ಸರ್ಕಾರಿ ಆದೇಶ ಸಂಖ್ಯೆ:ಆಇ 4(ಇ)ಸೇನಿಸೇ 2021 ಬೆಂಗಳೂರು, ದಿನಾಂಕ:21-06-2021 ಶಿಶುಪಾಲನ ರಜೆಯ ಮಂಜೂರು ಮಾಡಲಾಗಿರುತ್ತದೆ.

ರಾಜ್ಯದ ಎಲ್ಲಾ ಮಹಿಳಾ ನೌಕರರಿಗೆ ಸರ್ಕಾರದ ಆದೇಶ ಸಂಖ್ಯೆ:ಆಇ 4(ಇ) ಸೇನಿಸೇ 2021 ಬೆಂಗಳೂರು, ದಿನಾಂಕ:21-06-2021 ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಕೆಲವೊಂದು ಷರತ್ತಿಗೊಳಪಟ್ಟು ಇಡೀ ಸೇವಾವಧಿಯಲ್ಲಿ ಗರಿಷ್ಟ 6 ತಿಂಗಳ ವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲು ಅನುಮತಿಸಲಾಗಿದೆ.

ಬುದ್ದಿಮಾಂದ್ಯ/ಅಂಗವಿಕಲ ಮಕ್ಕಳನ್ನು ಹೊಂದಿರುವ ಸರ್ಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿರುವ 730 ದಿನಗಳ ಶಿಶುಪಾಲನ ರಜೆ ಸೌಲಭ್ಯಕ್ಕೆ ಅರ್ಹರಾದ ಮಹಿಳಾ ಶಿಕ್ಷಕಿಯರು 180 ದಿನಗಳ ಶಿಶುಪಾಲನಾ ರಜೆಯ ಸೌಲಭ್ಯಕ್ಕೆ ಅರ್ಹರಾಗತಕ್ಕದ್ದಲ್ಲ. ಬುದ್ದಿಮಾಂದ್ಯ/ಅಂಗವಿಕಲ ಮಕ್ಕಳನ್ನು ಹೊಂದಿದ್ದು, 730 ದಿನಗಳ ಶಿಶುಪಾಲನ ರಜೆ ಸೌಲಭ್ಯಕ್ಕೆ ಅರ್ಹರಾದ ಮಹಿಳಾ ಶಿಕ್ಷಕಿಯರನ್ನು ಹೊರತುಪಡಿಸಿ ಉಳಿದ ರಾಜ್ಯದ ಎಲ್ಲಾ ಅರ್ಹ ಮಹಿಳಾ ಶಿಕ್ಷಕಿಯರಿಗೆ 180 ದಿನಗಳ ಶಿಶುಪಾಲನಾ ರಜೆಯ ಸೌಲಭ್ಯವು ಅನ್ವಯವಾಗುತ್ತದೆ.

ಮಹಿಳಾ ಶಿಕ್ಷಕರಿಗೆ ‘ಶಿಶುಪಾಲನಾ ರಜೆ’ ಮಂಜೂರಾತಿ ನೀಡುವ ಕುರಿತಾದ ಚೆಕ್‌ ಲಿಸ್ಟ್

ಮಹಿಳಾ ನೌಕರರ ಹೆಸರು

ಪದನಾಮ

ಕೆಲಸ ನಿರ್ವಹಿಸುತ್ತಿರುವ ಶಾಲೆಯ ಹೆಸರು

ಶಿಶುಪಾಲನಾ ರಜೆ ಕೋರಿದ ಅವಧಿ ದಿನಾಂಕ

ಶಿಶುಪಾಲನೆ ರಜೆ ಕುರಿತು ಮಹಿಳಾ ನೌಕರರು ಅರ್ಜಿ ಸಲ್ಲಿಸಿದ ದಿನಾಂಕ.

ಇತರ ರಜೆಯೊಡನೆ ಹೊಂದಾಣಿಕೆ ಮಾಡಿಕೊಂಡಿದ್ದಲ್ಲಿ ಅದರ ವಿವರ

ಶಿಶುಪಾಲನೆ ರಜೆ ಕೋರಿರುವ ಮಗುವಿನ ಜನ್ಮ ದಿನಾಂಕ.

ಮಗುವಿನ ವಯಸ್ಸು:ತಿಂಗಳು

ಜನನ ಅಥವಾ ಆಧಾರ್ ಕಾರ್ಡ್ ಲಗತ್ತಿಸಿದೆಯೇ..?

ಯಾವ ದಿನಾಂಕದಿಂದ ಎಲ್ಲಿಯವರೆಗೆ ರಜೆ ಕೋರಿರುತ್ತಾರೆ.

ಶಿಶುಪಾಲನಾ ರಜೆ ಕೋರಿರುವ ದಿನಗಳ ಸಂಖ್ಯೆ

ಈಗಾಗಲೇ ಪಡೆದುಕೊಂಡಿರುವ ಶಿಶುಪಾಲನಾ ರಜೆಗಳ ಸಂಖ್ಯೆ

ಉಳಿದಿರುವ ಶಿಶುಪಾಲನಾ ರಜೆಗಳ ಸಂಖ್ಯೆ

ಶಿಶುಪಾಲನಾ ರಜೆ ಅವಧಿಯಲ್ಲಿನ ವಿಳಾಸ.

ರಜೆ ಅವಧಿಯಲ್ಲಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ

ಶಾಲಾ ಮುಖ್ಯಸ್ಥರ ಶಿಫಾರಸ್ಸು ದಿನಾಂಕ.

ಶಾಲಾ ಮುಖ್ಯಸ್ಥರ ಅಭಿಪ್ರಾಯ

Author

ಪ್ರಮುಖ ಸುದ್ದಿ

Stock market

Astrology