Home » ಲೈವ್ ನ್ಯೂಸ್ » ಮಹಾನಗರ ಪಾಲಿಕೆಯಿಂದ
ವಿಕಲಚೇತನರ ಕಲ್ಯಾಣ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಮಹಾನಗರ ಪಾಲಿಕೆಯಿಂದ
ವಿಕಲಚೇತನರ ಕಲ್ಯಾಣ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ರಾಯಚೂರು.07.ಆಗಸ್ಟ್ .25: ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯಿಂದ 2019-20, 2021-22, 2023-24 ಹಾಗೂ 2024-25ನೇ ಸಾಲಿನ ಎಸ್.ಎಫ್.ಸಿ ನಿಧಿ ಹಾಗೂ ನಗರಸಭೆ ನಿಧಿಯ ಶೇ.5ರ ಪರಿಷ್ಕೃತ ಕ್ರಿಯಾ ಯೋಜನೆಯಡಿ ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಶೇ.5ರ ಯೋಜನೆಯಡಿ ಪರಿಶಿಷ್ಟ ಜಾತಿಯ ವಿಕಲಚೇತನರ ಮನೆಯ ಮೇಲ್ಚಾವಣೆ ದುರಸ್ತಿ ಸಾಮಗ್ರಿಗಳು ಅಥವಾ ಅವಶ್ಯಕ ಸಾಮಗ್ರಿಗಳನ್ನು ಖರೀದಿಸಲು ಅವಶ್ಯಕತೆನುಗುಣವಾಗಿ ಒಂದು ಬಾರಿ 40,000 ರೂ.ಗಳ ಧನಸಹಾಯ ನೀಡಲಾಗುವುದು.
ವೈಯಕ್ತಿಕ ಸೌಲಭ್ಯಕ್ಕಾಗಿ 2019-20ನೇ ಸಾಲಿನ ಜೀವ ವಿಮಾ ಹಾಗೂ ಆರೋಗ್ಯ ಯೋಜನೆಯ ವಾರ್ಷಿಕ ಪ್ರೀಮಿಯಂ ಕಂತುಗಳನ್ನು ವಿಕಲಚೇತನರ ಜನರಿಗೆ ವಿಮೆಯನ್ನು ಮಾಡಿಸಿ ಅಥವಾ ನವೀಕರಿಸಿ ವಿಮಾ ಮೊತ್ತವನ್ನು ಪಾವತಿಸಲಾಗುತ್ತಿದೆ.
ದಾಖಲಾತಿಗಳು: ನಿಗದಿತ ನಮೂನೆಯಲ್ಲಿ ಅರ್ಜಿ, ದೃಢೀಕೃತ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಪ್ರಸಕ್ತ ಚಾಲ್ತಿ ಸಾಲು), ದೃಢೀಕೃತ ವಾಸಸ್ಥಳಕ್ಕೆ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್, ಪಾಸ್ ಪೋಟೋ ಅಳತೆಯ ಭಾವ ಚಿತ್ರ-2, ಬ್ಯಾಂಕ್ ಪಾಸ್ ಪುಸ್ತಕ್ ಹಾಗು ಐ.ಎಫ್.ಎಸ್.ಸಿ ಕೋಡ್‌ನೊಂದಿಗೆ ಬ್ಯಾಂಕ್ ವಿವರ, ವೈದ್ಯರಿಂದ ಪಡೆದ ಗುರುತಿನ ಚೀಟಿ ಹಾಗೂ ಯು.ಡಿ.ಎ. ಕಾರ್ಡ, ಮನೆಯ ಮೇಲ್ಚಾವಣೆ ಛಾಯಾ ಚಿತ್ರ. ಅಥವಾ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಜಾಗದ ಛಾಯಾಚಿತ್ರ, ಮೊಬೈಲ್ ನಂಬರ್‌ನೊoದಿಗೆ ಆಗಸ್ಟ್ 13ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅವದಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸರಿಯಾದ ದಾಖಲಾತಿಗಳು ಸಲ್ಲಿಸದೇ ಇದ್ದ ಪಕ್ಷದಲ್ಲಿ ತಮಗೆ ಯಾವುದೇ ಹಿಂಬರಹ ಕಳುಹಿಸದೇ ನೇರವಾಗಿ ವಿಭಾಗದ ಸಿಬ್ಬಂದಿಯವರು ತಿರಸ್ಕೃತ ಮಾಡಲಾಗುವುದೆಂದು ಪಾಲಿಕೆಯ ಆಡಳಿತ ವಿಭಾಗದ ಕಚೇರಿ ಸಹಾಯಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology