ಕೊಪ್ಪಳ.03.ಜುಲೈ.25:- ಭಾಗ್ಯನಗರ ಪಟ್ಟಣ ಪಂಚಾಯತಿಯ 2022-23ನೇ ಸಾಲಿನ ಶೇ.24.10 ರ ಯೋಜನೆಯ ಎಸ್.ಎಫ್.ಸಿ ಮುಕ್ತನಿಧಿ ಟಿ.ಎಸ್.ಪಿ, ಶೇ.40 ರ ವ್ಯಕ್ತಿಗತ ಕಾರ್ಯಕ್ರಮದ ಯೋಜನೆಯಡಿ ಪರಿಶಿಷ್ಟ ಪಂಗಡದ ಜನಾಂಗದವರಿಗೆ ನಿವೇಶನ ಖರೀದಿಸಲು ಮತ್ತು ಮನೆ ಮೇಲ್ಛಾವಣಿ ದುರಸ್ಥಿಗಾಗಿ ಸಹಾಯಧನ ನೀಡಲಾಗುತ್ತಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಫಲಾನುಭವಿಗಳು ಕಡ್ಡಾಯವಾಗಿ 5 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಪಟ್ಟಣದಲ್ಲಿ ವಾಸವಾಗಿರಬೇಕು. ಚಾಲ್ತಿ ಸಾಲಿನ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಕುಟುಂಬದ ಪಡಿತರ ಚೀಟಿ, ಪಾಸ್ಪೋರ್ಟ್ ಅಳತೆಯ ಇತ್ತೀಚಿನ 2 ಭಾವಚಿತ್ರಗಳು, ಪ್ರಸ್ತುತ ವರ್ಷದ ಆಸ್ತಿ ತೆರಿಗೆ ಪಾವತಿಸಿದ ಪ್ರತಿ ಹಾಗೂ ಚಾಲ್ತಿ ವರ್ಷದ ಫಾರಂ.03 ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಜುಲೈ 15 ರೊಳಗೆ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಭಾಗ್ಯನಗರ ಪ.ಪಂ.: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ?