Home » ಲೈವ್ ನ್ಯೂಸ್ » ಬೇಡವಾದ ನವಜಾತ ಶಿಶುವನ್ನು ದತ್ತು ಸಂಸ್ಥೆಗೆ ದಾಖಲಿಸಿ

ಬೇಡವಾದ ನವಜಾತ ಶಿಶುವನ್ನು ದತ್ತು ಸಂಸ್ಥೆಗೆ ದಾಖಲಿಸಿ

ರಾಯಚೂರು.03.ಸೆಪ್ಟೆಂಬರ.25: ಬೇಡವಾದ ನವಜಾತ ಶಿಶುವನ್ನು ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಒಪ್ಪಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಎರಡು ನವಜಾತ ಶಿಶುಗಳನ್ನು ಅಪರಿಚಿತ ವ್ಯಕ್ತಿಗಳು ಹಳ್ಳದ ದಂಡೆಯಲ್ಲಿ ಮತ್ತು ಕ್ಯಾನಲ್ ಪಕ್ಕದಲ್ಲಿ ಎಸೆದು ಹೋಗಿದ್ದು, ಸಾರ್ವಜನಿಕರು ನೀಡಿದ ಮಾಹಿತಿಯ ಆಧಾರದ ಮೇಲೆ ಎರಡು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಇದು ಅತ್ಯಂತ ಅಮಾನವೀಯ ಕೃತ್ಯವಾಗಿದೆ.

ನವಜಾತ ಶಿಶುಗಳು ತಮಗೆ ಬೇಡವಾದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ:1098ಗೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ಸಂಬoಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ಸ್ವೀಕರಿಸಿ ಸರ್ಕಾರಿ ದತ್ತು ಸಂಸ್ಥೆಗೆ ದಾಖಲು ಮಾಡುತ್ತಾರೆ.

ಈ ಪ್ರಕ್ರಿಯೆಯಲ್ಲಿ ನವಜಾತ ಮಗುವಿನ ತಾಯಿ ಪೋಷಕರಿಗೆ ಯಾವುದೇ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಯಾವುದೇ ಭಯ ಆತಂಕವಿಲ್ಲದೇ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಿ ಬೇಡವಾದ ಮಗುವನ್ನು ಒಪ್ಪಿಸಬೇಕು.

ಸಾರ್ವಜನಿಕರು ಯಾವುದೇ ಕಾರಣಕ್ಕು ಮಕ್ಕಳನ್ನು ಕಸದ ಬುಟ್ಟಿಯಲ್ಲಿ, ರಸ್ತೆ ಬದಿಯಲ್ಲಿ, ತಿಪ್ಪೆ ಗುಂಡಿಯಲ್ಲಿ ಹಾಕುವುದರ ಮೂಲಕ ಮಕ್ಕಳ ಸಾವಿಗೆ ಕಾರಣರಾಗಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ನವೀನ್‌ಕುಮಾರ ಯು ಅವರು ರಾಯಚೂರು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology