Home » ಲೈವ್ ನ್ಯೂಸ್ » ಬೀದರ: ವಿದ್ಯಾರ್ಥಿಗಳ ಬಸ್ ಪಾಸ್‌ಗಾಗಿ ಅರ್ಜಿ ಆಹ್ವಾನ.

ಬೀದರ: ವಿದ್ಯಾರ್ಥಿಗಳ ಬಸ್ ಪಾಸ್‌ಗಾಗಿ ಅರ್ಜಿ ಆಹ್ವಾನ.

ಬೀದರ.04.ಜೂನ್.25:- ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೀದರ ವಿಭಾಗದಿಂದ 2025-26ನೇ ಸಾಲಿನ ವಿದ್ಯಾರ್ಥಿಗಳ ಬಸ್ ಪಾಸ್ ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆಸಕ್ತರು ಸೇವಾ ಸಿಂಧು ಪೋರ್ಟಲ್ ಮುಖಾಂತರ ಅಥವಾ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ 30 ರೂ. ಸೇವಾ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿದ ಕೌಂಟರ್‌ಗೆ ನಿಗದಿತ ಪಾಸಿನ ಶುಲ್ಕ ನಗದು ಅಥವಾ ಕ್ರೆಡಿಟ್ ಕಾರ್ಡ, ಡಿಬಿಟ್ ಕಾರ್ಡ ಅಥವಾ ಯುಪಿಐ ಮೂಲಕ ಪಾವತಿಸಿ ಪಾಸ್ ಪಡೆಯಬಹುದು.

ಬಸವಕಲ್ಯಾಣ, ಔರಾದ, ಚಿಟಗುಪ್ಪಾ, ಭಾಲ್ಕಿ, ಬೀದರ ಕೇಂದ್ರ ಬಸ್ ನಿಲ್ದಾಣ, ಕರ್ನಾಟಕ ಒನ್ ನೌಬಾದ, ಹುಮನಾಬಾದದ ಕೌಂಟರ್‌ನಲ್ಲಿ ಪಾಸ್ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 7760992202ಗೆ ಸಂಪರ್ಕಿಸುವAತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology