Home » ಲೈವ್ ನ್ಯೂಸ್ » ನಕಲಿ ಪಿಎಚ್.ಡಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಂಡಿರುವ ದೊಡ್ಡ ಜಾಲವೇಬೆಳಕಿಗೆ ಬಂದಿದೆ.

ನಕಲಿ ಪಿಎಚ್.ಡಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಂಡಿರುವ ದೊಡ್ಡ ಜಾಲವೇಬೆಳಕಿಗೆ ಬಂದಿದೆ.

ಅತಿಥಿಗಳ ಪ್ರಮಾಣಪತ್ರ ನಕಲಿ!

ಬೆಂಗಳೂರು.07.ಜನವರಿ.26: ಉನ್ನತ ಶಿಕ್ಷಣ ಇಲಾಖೆ. ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಪಡೆಯುವ ಸಲುವಾಗಿ ನಕಲಿ ಪಿಎಚ್ .ಡಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಂಡಿರುವ ದೊಡ್ಡ ಜಾಲವೇಬೆಳಕಿಗೆ ಬಂದಿದೆ.

ಕೋರ್ಟ್ ಆದೇಶದಂತೆ ಯುಜಿಸಿ ಅರ್ಹತೆ ಅನುಸಾರವಾಗಿ ನೇಮಕಗೊಳ್ಳಲು ಕೆಲ ಅತಿಥಿ ಉಪನ್ಯಾಸಕರು ಅನ್ಯರಾಜ್ಯಗಳ ವಿಶ್ವವಿದ್ಯಾಲಯಗಳಿಂದ ನಕಲಿ ದಾಖಲೆಗಳನ್ನು ಸಲ್ಲಿಸಿರುವುದನ್ನು ಕಾಲೇಜುಗಳ ಪ್ರಾಂಶುಪಾಲರು ಪತ್ತೆ ಹಚ್ಚಿದ್ದಾರ.

ಅತಿಥಿ ಉಪನ್ಯಾಸಕರ ನೇಮಕಾತಿ ಆದೇಶದಲ್ಲಿ ಪಿಎಚ್.ಡಿ

ಪ್ರಮಾಣಪತ್ರಗಳನ್ನು ಪರಿಶೀಲಿಸಿ ಇಎಂಐಎಸ್‌ನಲ್ಲಿ ನವೀಕರಿಸಲು ಪ್ರಾಂಶುಪಾಲರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಯಾವುದೇ ಪಿಎಚ್.ಡಿ ನಕಲಿ ಎಂದು ಕಂಡುಬಂದಲ್ಲಿ ಆ ಅಭ್ಯರ್ಥಿಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಅತಿಥಿ ಉಪನ್ಯಾಸಕ ಹುದ್ದೆಯಿಂದ ಮುಂದುವರಿಯದಂತೆ ನಿರ್ಬಂಧಿಸಲಾಗುತ್ತದೆ.

|ಮಂಜುಶ್ರೀ ಆಯುಕ್ತ, ಉನ್ನತ ಶಿಕ್ಷಣ ಇಲಾಖೆ, ಬೆಂಗಳೂರು.

ಕೊಪ್ಪಳ-ಗಂಗಾವತಿಯಲ್ಲಿ ಬಯಲು

ಕೊಪ್ಪಳ ಜಿಲ್ಲೆಯ ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಗಧ ವಿಶ್ವವಿದ್ಯಾಲಯದಿಂದ ನಕಲಿ ಪಿಎಚ್.ಡಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಂಡಿದ್ದ ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕರನ್ನು ಪ್ರಾಂಶುಪಾಲರು ಪತ್ತೆ ಹಚ್ಚಿದ್ದಾರೆ. ಹಾಗೆಯೇ, ಭಾಗ್ಯಶ್ರೀ ಡೌಲಿ ಎಂಬ ಅಭ್ಯರ್ಥಿಯು ಜಿ. ಗೀತಾ ಎಂಬುವವರ ಮಾರ್ಗದರ್ಶನದಲ್ಲಿ ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರವನ್ನು ವೆಬ್‌ಸೈಟ್‌ನಿಂದ ಪಡೆದು, ಹೆಸರು ಬದಲಾಯಿಸಿಕೊಂಡು ಕೊಪ್ಪಳದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹುದ್ದೆ ಪಡೆದಿರುವುದು ಬೆಳಕಿಗೆ ಬಂದಿದೆ.

2024-25  2025-26 ಸಾಲಿನಲ್ಲೇ ಅತ್ಯಧಿಕ ಅಭ್ಯರ್ಥಿಗಳು ಪಿಎಚ್.ಡಿ ಪಡೆದಿರುವುದು ಅನುಮಾನ ಮೂಡಿಸಿದೆ. ರಾಜ್ಯದಲ್ಲಿ ಒಟ್ಟು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಇದರಲ್ಲಿ ಜೀವ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಸಸ್ಯಶಾಸ್ತ್ರ, ಕಂಪ್ಯೂಟರ್ ಸೈನ್, ಅಪರಾಧ ಶಾಸ್ತ್ರ, ವಾಣಿಜ್ಯ, ಅರ್ಥಶಾಸ್ತ್ರ, ಶಿಕ್ಷಣ, ಭೌತಶಾಸ್ತ್ರ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮ, ಕನ್ನಡ, ಲೈಬ್ರರಿ ಸೈನ್ಸ್ ಸೇರಿದಂತೆ ಒಟ್ಟಾರೆ 33 ವಿಷಯಗಳಿಗೆ ಪ್ರಸ್ತುತ ಸಾಲಿನಲ್ಲಿ 7,310 ಅತಿಥಿ ಉಪನ್ಯಾಸಕರು ಯುಜಿಸಿ ಮಾನ್ಯ ಆದಾರದಲ್ಲಿ ನೇಮಕಗೊಂದಿಯಾರ 2022-23ನೇ ಸಾಲಿನಲ್ಲಿ 1,561 ಅಭ್ಯರ್ಥಿಗಳು ಮಾತ್ರ ಪಿಎಚ್.ಡಿ ಪಡೆದಿದ್ದರು. ನಂತರ ಏಕಾಏಕಿ 2024-25ರಲ್ಲಿ 4,532 ಹಾಗೂ 2025-26ರಲ್ಲಿ 5,221 ಅಭ್ಯರ್ಥಿಗಳು ಪದವಿ ಪಡೆದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಕನ್ನಡ ವಿಷಯವೊಂದರಲ್ಲೇ ಕಳೆದ ಎರಡು ವರ್ಷಗಳಲ್ಲಿ 2,120 ಅಭ್ಯರ್ಥಿಗಳು ಪಿಎಚ್.ಡಿ ಪಡೆದಿದ್ದಾರೆ. ಒಂದು ಪಿಎಚ್.ಡಿ ಪೂರ್ಣಗೊಳಿಸಲು ಕನಿಷ್ಠ ನಾಲ್ಕು ವರ್ಷ ಬೇಕಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.ಮಳ’ ಲಕ್ಷಾಂತರ ರೂಪಾಯಿಗಳ ವಹಿವಾಟು

ಅನ್ಯರಾಜ್ಯಗಳ ಸನ್‌ರೈಸ್ ಚರಣ್‌ಸಿಂಗ್‌ ವಿಶ್ವವಿದ್ಯಾಲಯ, ಮಗಧ ವಿಶ್ವವಿದ್ಯಾಲಯ, ಕೃಷ್ಣದೇವರಾಯ ವಿಶ್ವವಿದ್ಯಾಲಯ, ಸಬರಮತಿ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ಪಡೆದು ರಾಜ್ಯದ ನಾನಾ ಕಾಲೇಜುಗಳಲ್ಲಿ ಹುದ್ದೆ ಗಿಟ್ಟಿಸಿಕೊಂಡಿರುವ ಆರೋಪಗಳಿವೆ. ಒಂದು ನಕಲಿ ಪ್ರಮಾಣಪತ್ರಕ್ಕೆ ಐದು ಲಕ್ಷ ರೂ. ವ್ಯಯಿಸಲಾಗಿದೆ ಎನ್ನಲಾಗುತ್ತಿದೆ. ಕೆಲವು ಕಾಲೇಜುಗಳ ಪ್ರಾಂಶುಪಾಲರಿಗೆ ಅನುಮಾನ ಬಂದರೂ ಕೆಲವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಆರೋಪವೂ ಕೇಳಿಬಂದಿದೆ. ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವೇತನ ಪಡೆಯುತ್ತಿರುವುದರ ಜೊತೆಗೆ ಪಿಎಚ್.ಡಿಯನ್ನು ರೆಗ್ಯುಲರ್ ಎಂದು ತೋರಿಸುವ ಪ್ರಮಾಣಪತ್ರ ಪಡೆದಿರುವುದು ಆತಂಕಕಾರಿ ಸಂಗತಿಯಾಗಿದೆ.

ಮಳ’ ಲಕ್ಷಾಂತರ ರೂಪಾಯಿಗಳ ವಹಿವಾಟು

Author

ಪ್ರಮುಖ ಸುದ್ದಿ

Stock market

Astrology