Home » ಲೈವ್ ನ್ಯೂಸ್ » ಪ್ರವೇಶಾತಿಗಾಗಿ ಆಫ್‌ಲೈನ್ ಅರ್ಜಿ ಆಹ್ವಾನ

ಪ್ರವೇಶಾತಿಗಾಗಿ ಆಫ್‌ಲೈನ್ ಅರ್ಜಿ ಆಹ್ವಾನ

ಬೀದರ.15.ಜುಲೈ.25:- 2025ನೇ ಸಾಲಿನ ಶೈಕ್ಷಣಿಕ ಸಾಲಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬೀದರ ಇಲ್ಲಿ ಖಾಲಿ ಉಳಿದಂತಹ ಸಿಟುಗಳಿಗೆ ಆಫ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಚ್ಛೆಯುಳ್ಳ ಅಭ್ಯರ್ಥಿಗಳು ಖುದ್ದಾಗಿ ಬಂದು ಎಲ್ಲಾ ಮೂಲದಾಖಲಾತಿಗಳ ಎರಡು ಸೆಟ್ಟು ಝಿರಾಕ್ಸ ಪ್ರತಿಗಳು ಕೊಟ್ಟು ಹಾಗೂ ಮೂಲದಾಖಲಾತಿಗಳ ಪರೀಶೀಲನ ಶುಲ್ಕ 50 ರೂ. ಕೊಟ್ಟು ಪರಿಶೀಲಿಸಿಕೊಳ್ಳುವುದು. ಮೆರಿಟ ಕಮ್ ರಿಜರ್ವೇಶನ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು, ಹತ್ತನೇ ಪಾಸಾದ, 14 ವರ್ಷ ಮೇಲ್ಪಟ್ಟ ಹಾಗೂ ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದ / 8ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಬೆಸುಗೆಗಾರ ವೃತ್ತ್ತಿಗೆ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅಥವಾ ಸಮೀಪದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಹೆಲ್ಪ ಡೆಸ್ಕಗಳಲ್ಲಿ ಮಾಹಿತಿ ಪಡೆದು ಅಲ್ಲಿಯೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9901097655, 7259854729, ನಗರದ ಸರಕಾರಿ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯರ(ಪ್ರ) ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology