Home » ಲೈವ್ ನ್ಯೂಸ್ » ಪ್ರಯಾಣದ ಸಂಧರ್ಭದಲ್ಲಿ ಮೋದಿ ಹಾಸ್ಯಕ್ಕೆ ಸಿದ್ದು, ಡಿಕೆಶಿಗೆ ನಗುವೋ ನಗು ಸಾಂದರ್ಭಿಕ ಚಿತ್ರ.

ಪ್ರಯಾಣದ ಸಂಧರ್ಭದಲ್ಲಿ ಮೋದಿ ಹಾಸ್ಯಕ್ಕೆ ಸಿದ್ದು, ಡಿಕೆಶಿಗೆ ನಗುವೋ ನಗು ಸಾಂದರ್ಭಿಕ ಚಿತ್ರ.

ಬೆಂಗಳೂರು.10.ಆಗಸ್ಟ್.25:- ನಮ್ಮ ಮೆಟ್ರೋ  ರೈಲು ಉದ್ಘಾಟನಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಡಿದ್ದಾರೆ ” ಹಳದಿ ಮಾರ್ಗಕ್ಕೆ ಇಂದು ಚಾಲನೆ ನೀಡಿದ ಬಳಿಕ “ಪ್ರಧಾನಿ ನರೇಂದ್ರ ಮೋದಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಜತೆಯಾಗಿ ಪ್ರಯಾಣಿಸಿದರು.

ಪ್ರಯಾಣದ ಸಂದರ್ಭದಲ್ಲಿ ಮೋದಿ ಹಾಸ್ಯಕ್ಕೆ ಸಿದ್ದು, ಡಿಕೆಶಿಗೆ ನಗುವೋ ನಗು, ಮಾತು ಮಾತಲ್ಲೇ ಪ್ರಧಾನಿಗೆ ಚಮಕ್ ಕೊಟ್ಟ ಸಿಎಂ!

ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್‌ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ ನಂತರ ಮೆಟ್ರೋ ಉದ್ಘಾಟನೆ ಮಾಡಲು ಬಂದರು.

ಈ ಸಂದರ್ಭದಲ್ಲಿ ಮೋದಿ ಯಾವುದೇ ವಿಷಯನ್ನು ಪ್ರಸ್ತಾಪಿಸಿದ್ದಾರೆ. ಈ ಮಾತನ್ನು ಕೇಳಿ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್‌ ಬಿದ್ದು ಬಿದ್ದು ನಕ್ಕಿದ್ದಾರೆ.

ಕರ್ನಾಟಕಕ್ಕೆ ಹೆಚ್ಚು ಒತ್ತುಕೊಡಬೇಕು ಎಂದಾಗ, ಸಾರ್ವಜನಿಕರು, ಹಾಗೂ ರಾಜ್ಯ ನಾಯಕರು ನಕ್ಕಾಗ, ಸಿಎಂ ಕೂಡಾ ಏನ್ರೀ ಎಲ್ಲ ನಗ್ತಿದೀರಿ ಎಂದು ಪ್ರಶ್ನೆ ಮಾಡಿ ನಗೆ ಬೀರಿದರು. ಭಾಷಣದ ಬಳಿಕ ಪ್ರಧಾನಿ ಬಳಿ ಕುಳಿತುಕೊಳ್ಳುವಾಗಲೂ ಸಣ್ಣ ಮಾತುಕತೆಯನ್ನು ನಡೆಸಿ ಪ್ರಧಾನಿ ಮುಖದಲ್ಲೂ ನಗು ತರಿಸಿದರು.

Author

ಪ್ರಮುಖ ಸುದ್ದಿ

Stock market

Astrology