Home » ಲೈವ್ ನ್ಯೂಸ್ » ಪ್ರತಿಷ್ಠಿತ ಯುನಿವರ್ಸಿಟಿ ಹೆಸರಿನಲ್ಲಿ ನಕಲಿ ಸರ್ಟಿಫಿಕೇಟ್ ಬಳಕೆ

ಪ್ರತಿಷ್ಠಿತ ಯುನಿವರ್ಸಿಟಿ ಹೆಸರಿನಲ್ಲಿ ನಕಲಿ ಸರ್ಟಿಫಿಕೇಟ್ ಬಳಕೆ

ಅಂಕೋಲಾ.21.ಫೆಬ್ರವರಿ.26: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಎಂಫಿಲ್ ಪ್ರಮಾಣ ಪತ್ರ ಸಲ್ಲಿಸಿದವರಿಗೆ 6 ಅಂಕ ಹೆಚ್ಚುವರಿ ದೊರತು, ಮೆರಿಟ್‌ನಲ್ಲಿ ಅವರು ಮೇಲಕ್ಕೆ ಬಂದಿರುತ್ತಾರೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಎಂಫಿಲ್ ಪ್ರಮಾಣ ಪತ್ರ ತನ್ನದೇ ಆದ ಮಹತ್ವ ಹೊಂದಿದೆ ಎನ್ನಲಾಗಿದೆ.

ಈ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಅಂಕೋಲಾದಲ್ಲಿ ನಕಲಿ ಸರ್ಟಿಫಿಕೇಟ್ ನೀಡಿದ ಮಾದರಿಯಲ್ಲೇ ಹಾವೇ-ರಿಯ ಸರಕಾರಿ ಮಹಿಳಾ ಕಾಲೇಜಿನಲ್ಲೂ ಓರ್ವರು ಇದೇ ಯುನಿವರ್ಸಿಟಿಯ ನಕಲಿ ಪ್ರಮಾಣ ಪತ್ರ ನೀಡಿ ಉಪನ್ಯಾಸಕ ಹುದ್ದೆ ಗಿಟ್ಟಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಎಚ್ಚೆತ್ತ ಇಲಾಖೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ರಾಜ್ಯದಾದ್ಯಂತ ವಿವಿದೆಡೆ ಈ ರೀತಿ ನಕಲಿ ಪ್ರಮಾಣ ಪತ್ರ ಚಾಲನೆಯಲ್ಲಿರುವುದು ಕಂಡು ಬಂದಿತ್ತು.

ಈ ಇನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ ಅವರು ಎಲ್ಲ ಸರಕಾರಿ ಕಾಲೇಜುಗಳ ಪ್ರಾಂಶುಪಾಲರ ವಿಡಿಯೋ ಕಾನ್‌ಫರೆನ್ಸ್ ಸಭೆ ನಡೆಸಿ ಮೀರತ್‌ನ ಚೌಧರಿ ಚರಣಸಿಂಗ್ ಯುನಿವರ್ಸಿಟಿ, ರಾಜಸ್ಥಾನದ ಸನ್‌ರೈಸ್ ಯುನಿವರ್ಸಿಟಿ ಹಾಗೂ ರಾಜಸ್ಥಾನದ ಸಿಂಘಾನಿಯಾ ಯುನಿವರ್ಸಿಟಿ ಹೆಸರಿನಲ್ಲಿ ನಕಲಿ ಸರ್ಟಿಫಿಕೇಟ್ ಸಲ್ಲಿಕೆ ಮಾಡಿರುವ ಬಗ್ಗೆ ದೂರುಗಳಿದ್ದು, ಯಾರೆಲ್ಲ ಈ ಮೂರು ಯುನಿವರ್ಸಿಟಿ ಹೆಸರಿನಲ್ಲಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಪರಿಶೀಲಿಸುವಂತೆ ಸೂಚಿಸಿದ್ದರು. ಹೀಗೆ ಪರಿಶೀಲನೆ ಸಂದರ್ಭದಲ್ಲಿ ಅಂಕೋಲಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓರ್ವ ಉಪನ್ಯಾಸಕರು ಮೀರತ್‌ನ ಚೌಧರಿ ಚರಣಸಿಂಗ್ ಯುನಿವರ್ಸಿಟಿಯ ಪ್ರಮಾಣ ಪತ್ರ ನೀಡಿರುವುದನ್ನು ಕಂಡು ಬಂದಿದೆ.

ಅಂಕೋಲಾ ಕಾಲೇಜಿನ ಪ್ರಾಂಶುಪಾಲರು ಹಾವೇರಿಯ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಮೀರತ್‌ನ ಚೌಧರಿ ಚರಣಸಿಂಗ್ ಯುನಿವರ್ಸಿಟಿಯ ಫಿಸಿಕಲ್ ಏಜ್ಯುಕೇಶನ್ ವಿಭಾಗದ ಮುಖ್ಯಸ್ಥರ ದೂರವಾಣಿ ಸಂಖ್ಯೆ ಪಡೆದು ಅವರ ಬಳಿ ವಿಚಾರಿಸಿದಾಗ ಈ ಉಪನ್ಯಾಸಕರ ಹೆಸರಿನ ಯಾವುದೇ ಅಭ್ಯರ್ಥಿ ಕರ್ನಾಟಕದಿಂದ ಇಲ್ಲ ಎಂದು ಖಚಿತಪಡಿಸಿದ್ದಾರೆ.

ಯುನಿವರ್ಸಿಟಿ ಪ್ರಮಾಣ ಪತ್ರದ ಸಹಿಗೂ ನಕಲಿ ಪ್ರಮಾಣ ಪತ್ರದ ಸಹಿಗೂ ಹೋಲಿಕೆ ಇರಲಿಲ್ಲ ಎಂದು ತಿಳಿದು ಬಂದಿದೆ.

Author

ಪ್ರಮುಖ ಸುದ್ದಿ

Stock market

Astrology