Home » ಲೈವ್ ನ್ಯೂಸ್ » ಪತ್ರಕರ್ತರಿಗೆ ಸಂಘಕ್ಕೆ ಶ್ರೀಘವೇ ನೀವೇಶನ : ಶಾಸಕ ಎ ಆರ್ ಕೆ

ಪತ್ರಕರ್ತರಿಗೆ ಸಂಘಕ್ಕೆ ಶ್ರೀಘವೇ ನೀವೇಶನ : ಶಾಸಕ ಎ ಆರ್ ಕೆ

ಯಳಂದೂರು.09.ಜನವರಿ.26: ಯಳಂದೂರು ತಾಲ್ಲೂಕಿನ ಪತ್ರಕರ್ತರ ಭವನಕ್ಕೆ ಶ್ರೀಘ್ರದಲ್ಲೇ ನಿವೇಶನ ನೀಡಿ ಸಂಕ್ರಾಂತಿ ನಂತರ ಗುದ್ದಲಿಪೂಜೆ ಮಾಡಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು
ಪಟ್ಟಣದ ತಾಲ್ಲೂಕು ಪಂಚಾಯಿತಿಯ ಗ್ಯಾರೆಂಟಿ ಯೋಜನೆಗಳ ಸಂಭಾಗಣದಲ್ಲಿ ನಡೆದ ಜಿಲ್ಲಾ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನಿಸಿ ಮಾತನಾಡಿ ಮುಂದಿನ ಈಗಾಲೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯೊಂದಿಗೆ ಮಾತಾನಾಡಿದ್ದು ಸಂಕ್ರಾಂತಿ ನಂತರ ನಿವೇಶನ ಗುರುತಿಸಿ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನಡೆಸಲಾಗುವುದು ಎಂದರು, ಹೊಸ ಪದಾಧಿಕಾರಿಗಳು ಎಲ್ಲರನ್ನು ಒಟ್ಟಾಗಿ ಸೇರಿಸಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ರೀತಿ ಕೆಲಸ ಕಾರ್ಯಗಳನ್ನು ನಡೆಸಕೊಂಡು ಹೋಗುವಂತೆ ಶುಭ ಕೋರಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನಗಳ ಅಧ್ಯಕ್ಷ ಹೆಚ್. ವಿ. ಚಂದ್ರು, ತಾಲ್ಲೂಕು ಅಧ್ಯಕ್ಷ ಪ್ರಭುಪ್ರಸಾದ್, ಯುವ ಕಾಂಗ್ರೆಸ್ ಮುಖಂಡ ಜೇತನ್ ದೊರೆರಾಜು, ಕೊಳ್ಳೇಗಾಲ ನಗರ ಸಭೆ ನಾಮ ನಿದೇರ್ಶನ ಸದಸ್ಯ ಸ್ವಾಮಿನಂಜಪ್ಪ, ಪಟ್ಟಣ ಪಂಚಾಯಿತಿ ನಾಮ ನಿದೇರ್ಶನ ಸದಸ್ಯ ಲಿಂಗರಾಜಮೂರ್ತಿ, ಬಳೇಪೇಟೆ  ಪ್ರಕಾಶ್, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಯರಿಯೂರು ನಾಗೇಂದ್ರ, ಜಿಲ್ಲಾ ನಿದೇರ್ಶಕ ವೈ. ಎಂ. ಭಾನುಪ್ರಕಾಶ್, ತಾಲ್ಲೂಕು ಅಧ್ಯಕ್ಷ ವಿ. ನಾಗರಾಜು, ಪ್ರಧಾನ ಕಾರ್ಯದರ್ಶಿ ಗುಂಬಳ್ಳಿ, ಉಪಾಧ್ಯಕ್ಷ ಗುಂಬಳ್ಳಿ ನಾಗೇಂದ್ರ, ಲೋಕೇಶ್, ಖಜಾಂಚಿ ಇರ್ಫಾನ್, ಕೆಸ್ತೂರು ಪ್ರಸನ್ನ, ಮುಸರಫ್, ಪುನೀತ್, ಉಮೇಶ್, ಡಾನ್‍ರಂಗಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.

Author

ಪ್ರಮುಖ ಸುದ್ದಿ

Stock market

Astrology