Home » ಲೈವ್ ನ್ಯೂಸ್ » ನಾನ್ ಯುಜಿಸಿ ಅತಿಥಿ ಉಪನ್ಯಾಸಕರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರಿಗೆ ಮನವಿ.

ನಾನ್ ಯುಜಿಸಿ ಅತಿಥಿ ಉಪನ್ಯಾಸಕರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರಿಗೆ ಮನವಿ.

ಬೆಂಗಳೂರು.10.ಜನವರಿ.26: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾನ್ ಯುಜಿಸಿ ಅತಿಥಿ ಉಪನ್ಯಾಸಕರು ಇಂದು ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಅವರನ್ನು ಭೇಟಿ ಮಾಡಿ ನಾನ್ ಯುಜಿಸಿ ಉಪನ್ಯಾಸಕರಿಗೆ ನ್ಯಾಯ ಒದಗಿಸುವ ಬಗ್ಗೆ ಮನವಿ ಪತ್ರ ನೀಡಿ ಒತ್ತಾಯಿಸಲಾಯಿತು.

ನಮ್ಮ ಮನವಿಗೆ ಸ್ಪಂಧಿಸಿದ ಸಚಿವರು ಶೀಘ್ರದಲ್ಲಿಯೇ ಶುಭ ಸುದ್ದಿಯನ್ನು ಕೊಡುವುದಾಗಿ ಭರವಸೆ ನೀಡಿದರು.

ಇದು ಕಣ್ಣೊರೆಸುವ ತಂತ್ರ ಎಂದು ಕೆಲವರು ಭಾವಿಸಬಹುದು. ಆದರೆ ಭರವಸೆಯೇ ಬದುಕು ಎಂಬುದರಲ್ಲಿ ನಂಬಿಕೆ ಇಟ್ಟಿರುವವ ನಾನು.

ಸಚಿವರು ಎಲ್ಲೆಲ್ಲಿ ನನಗೆ ಮಾತನಾಡಲು ಸಿಕ್ಕುತ್ತಾರೆಯೋ ಅಲ್ಲೆಲ್ಲ ಇದೇ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸುತ್ತಾ ನ್ಯಾಯ ಸಿಗುವವರೆಗೆ ಹೋರಾಡುವ ಮನಸ್ಸು ಇಟ್ಟುಕೊಂಡಿದ್ದೇನೆ.

ನನ್ನಂತೆ ಅನೇಕ ಮಂದಿ ಈ ವಿಷಯದಲ್ಲಿ ಕಾರ್ಯೋನ್ಮುಖರಾಗಿದ್ದು ಅವರೆಲ್ಲರಿಗೂ ಶುಭ ಕೊರುತ್ತೇನೆ..
ಮುನಿರಾಜು ಎಂ ಅರಿಕೆರೆ
ಅಧ್ಯಕ್ಷರು ಅತಿಥಿ ಉಪನ್ಯಾಸಕರು

Author

ಪ್ರಮುಖ ಸುದ್ದಿ

Stock market

Astrology