Home » ಲೈವ್ ನ್ಯೂಸ್ » ತುರ್ತು ಪರಿಸ್ಥಿತಿಯಲ್ಲಿ ವ್ಯಕ್ತಿಯ ಆರೋಗ್ಯ ಸುರಕ್ಷತೆಗೆ ಮನೋಸ್ತೆöರ್ಯ ಅಗತ್ಯ: ನ್ಯಾ.ಹೆಚ್ ಎ. ಸಾತ್ವೀಕ್ ಸಲಹೆ

ತುರ್ತು ಪರಿಸ್ಥಿತಿಯಲ್ಲಿ ವ್ಯಕ್ತಿಯ ಆರೋಗ್ಯ ಸುರಕ್ಷತೆಗೆ ಮನೋಸ್ತೆöರ್ಯ ಅಗತ್ಯ: ನ್ಯಾ.ಹೆಚ್ ಎ. ಸಾತ್ವೀಕ್ ಸಲಹೆ

ರಾಯಚೂರು.17.ಅಕ್ಟೋಬರ್.25: ಮಾನವೀಯ ತುರ್ತು ಪರಿಸ್ಥಿತಿಗಳಲ್ಲಿ ಪ್ರತಿಯೊಬ್ಬರ ಮಾನಸಿಕ ಆರೋಗ್ಯ ಕಾಪಾಡುವ ಹೊಣೆಗಾರಿಕೆ ಎಲ್ಲರದಾಗಿದ್ದು, ಈ ದಿಶೆಯಲ್ಲಿ ಅಕಾಲಿಕವಾಗಿ ಎದುರಾಗುವ ನೈಸರ್ಗಿಕ ವಿಪತ್ತು, ಮಾನವೀಯ ಸಂಕಷ್ಟಗಳು, ಸಾರ್ವಜನಿಕ ಆರೋಗ್ಯ ತುರ್ತು ಸನ್ನಿವೇಶಗಳಲ್ಲಿ ಬೆಂಬಲ ಆರೈಕೆಯನ್ನು ನಾವೆಲ್ಲರೂ ನೀಡೋಣ ಎಂದು ಗೌರವಾನ್ವಿತ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹನುಮಂತ ಎ ಸಾತ್ವಿಕ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ರೀಮ್ಸ್ ಸಂಯೋಗದೊAದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಅಕ್ಟೋಬರ್ 17ರಂದು ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ನೈಸರ್ಗಿಕ ವಿಪತ್ತುಗಳು, ಯುದ್ದ, ಸಂಘರ್ಷಗಳು ಹಾಗೂ ಎಲ್ಲಡೆ ವ್ಯಾಪಕವಾಗಿ ಕಂಡುಬರುವ ಸಾಂಕ್ರಾಮಿಕ ರೋಗಗಳ ಸನ್ನಿವೇಶಗಳಲ್ಲಿ ಮಾನಸಿಕ ಸ್ಥೈರ್ಯ ನೀಡುವ ಕೆಲಸ ಮಾಡುವ ಹೊಣೆಗಾರಿಕೆ ಎಲ್ಲರದ್ದಾಗಿದೆ. ನಾವು ನಿರ್ಲಕ್ಷಿಸುವ ವಿಷಯಗಳಲ್ಲಿ ಮಾನಸಿಕ ಆರೋಗ್ಯವು ಒಂದಾಗಿದ್ದು, ಇವತ್ತು ಕಾನೂನಿನ ಮೂಲಕ ಅಂತಹ ವ್ಯಕ್ತಿಗಳಿಗೆ ಬೆಂಬಲ ನೀಡುವ ಕಾರ್ಯ ಮಾಡಲಾಗುತ್ತಿದ್ದು ಇದರ ಸದುಪಯೋಗ ಪಡೆಯಲು ಹೆಚ್ಚಿನ ಜಾಗೃತಿ ನೀಡಲು ಅವರು ಸಲಹೆ ಮಾಡಿದರು.


ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ನಂದಿತಾ ಎಮ್ ಎನ್ ಅವರು ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಾದ್ಯಂತ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಥಾಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೇ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದೇವೆ. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಇದನ್ನು ನಿಯಮಿತ ನಡೆಸುತ್ತಿದ್ದೇವೆ. ಮನೋಚೈತನ್ಯ ಕಾರ್ಯಕ್ರಮ ಮೂಲಕ ತಾಲೂಕಾ ಮಟ್ಟದ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಪ್ತಸಮಾಲೋಚನೆ, ಸಲಹೆ, ಚಿಕಿತ್ಸೆ ನೀಡುವ ಜೊತೆಗೆ ತುರ್ತು ಪರಿಸ್ಥಿತಿಗಳಿಗೆ ತಕ್ಕಂತೆ ತುರ್ತು ಮಾನಸಿಕ ಆರೈಕೆ ಯೋಜನೆಯ ಕುರಿತು ಶಾಲಾ-ಕಾಲೇಜುಗಳಲ್ಲಿ ಜೀವನ ಕೌಶಲ್ಯ ಶಿಕ್ಷಣ, ಒತ್ತಡ ನಿರ್ವಹಣಾ ತರಬೇತಿ ನೀಡಲಾಗುತ್ತಿದೆ. ಜೊತೆಗೆ ಪತ್ರಿಕಾ, ವಿದ್ಯುನ್ಮಾನ ಮಾಧ್ಯಮಗಳ ಮೂಲಕವು ಮಾಹಿತಿಯನ್ನು ಹಂಚಿಕೊoಡು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮನೋರೋಗ ತಜ್ಞರಾದ ಡಾ.ಮನೋಹರ ಪತ್ತಾರ ಉಪನ್ಯಾಸ ನೀಡಿದರು. ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ರೀಮ್ಸ್ನ ಪ್ರಭಾರಿ ಡೀನ್ ಡಾ.ಅರವಿಂದ್ ಸಂಗಾವಿ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರಯ್ಯ ಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ ಡಾ.ಶಿವಕುಮಾರ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹಮ್ಮದ್ ಶಾಕೀರ್, ಸೇರಿದಂತೆ ತಾಲೂಕು ಅರೋಗ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಸ್ವಾಗತಿಸಿ ವಂದಿಸಿದರು.

Author

ಪ್ರಮುಖ ಸುದ್ದಿ

Stock market

Astrology