Home » ಲೈವ್ ನ್ಯೂಸ್ » ಡಾ.ರಾಮಚಂದ್ರ ಗಣಾಪೂರ ಅವರಿಗೆ ‘ವಿದ್ಯಾವಿಭೂಷಣ ಪ್ರಶಸ್ತಿ’

ಡಾ.ರಾಮಚಂದ್ರ ಗಣಾಪೂರ ಅವರಿಗೆ ‘ವಿದ್ಯಾವಿಭೂಷಣ ಪ್ರಶಸ್ತಿ’

ಬೀದರ.15.ಅಕ್ಟೋಬರ.25: ನಾಡಿನ ಕನ್ನಡದ ಶ್ರೀಗಳು, ಜಗದ್ಗುರುಗಳೆಂದೇ ಸಮಾಜಮುಖಿ ಕಾರ್ಯಗಳಿಂದ ನಾಡಿನಲ್ಲಿ  ಖ್ಯಾತಿ ಪಡೆದ ಸುಕ್ಷೇತ್ರ ಹಾರಕೂಡದ ಪೂಜ್ಯರಾದ ಡಾ.ಚೆನ್ನವೀರ ಶಿವಾಚಾರ್ಯರ ಜನ್ಮದಿನದ ಪ್ರಯುಕ್ತ ಸಾಹಿತಿ ಡಾ.ರಾಮಚಂದ್ರ ಗಣಾಪೂರ ಅವರಿಗೆ ಹಾರಕೂಡದ ಪೂಜ್ಯರು ಹಾಗೂ ಗಣ್ಯರಿಂದ ವಿದ್ಯಾವಿಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಡಾ.ರಾಮಚಂದ್ರ ಗಣಾಪೂರ ಅವರ ಶೈಕ್ಷಣಿಕ ಹಾಗೂ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಗಣಾಪೂರ ಅವರಿಗೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದ ‘ಶ್ರೀಚೆನ್ನರೇಣುಕ ಬಸವ ಮಂಟಪ’ದಲ್ಲಿ ಅ. 16 ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ಡಾ.ರಾಮಚಂದ್ರ ಗಣಾಪೂರ ಅವರಿಗೆ ಪ್ರಶಸ್ತಿ ಸಂದುದಕ್ಕಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಸದಸ್ಯರು ಡಾ.ಸಂಜೀವಕುಮಾರ ಅತಿವಾಳೆ, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ವಿಜಯಕುಮಾರ ಸೋನಾರೆೆ, ಕನ್ನಡ ಜಾಗೃತ ಸಮಿತಿ ಜಿಲ್ಲಾ ಸದಸ್ಯರಾದ ಸುನೀಲ ಬಾವಿಕಟ್ಟಿ, ಅಂಬರಿಷ ಮಲ್ಲೇಶಿ, ಶ್ರೀಮತಿ ಪಾರ್ವತಿ ಸೋನಾರೆ, ಮಾರುತಿ ಮಾಸ್ಟರ್, ಡಾ. ನಾಗೇಶ ಸಾವಳೆ, ಆನಂದ ಚಾಕೂರೆ, ಸತ್ಯಪ್ರಕಾಶ ಹಳ್ಳಿಖೇಡಕರ್, ನರೇಂದ್ರ ಜಾಧವ, ಚಂದ್ರಕಾoತ ಹಳ್ಳಿಖೇಡಕರ್ ಮುಂತಾದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology