Home » ಕೊಪ್ಪಳ » ಕೊಪ್ಪಳ | ಜೂ.21 ರಂದು ಮೂಲ ದಾಖಲಾತಿ ಪರಿಶೀಲನೆ

ಕೊಪ್ಪಳ | ಜೂ.21 ರಂದು ಮೂಲ ದಾಖಲಾತಿ ಪರಿಶೀಲನೆ

ಕೊಪ್ಪಳ.13.ಜೂನ್25:- ಜಿಲ್ಲೆಯ ಕಲ್ಯಾಣ ಕರ್ನಾಟಕ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ 02 ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಜೂನ್ 21 ರಂದು ಮೂಲ ದಾಖಲಾತಿ ಪರಿಶೀಲನೆ ನಡೆಯಲಿದೆ.


ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ನೇಮಕಾತಿ ಮಾಡುವ ಸಲುವಾಗಿ ರೋಸ್ಟರ್ ಕಮ್ ಮೆರಿಟ್ ಆಧಾರದ ಮೇಲೆ 1:3 ಅನುಪಾತದಲ್ಲಿ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ತಯಾರಿಸಿ ಜಿಲ್ಲಾ ವೆಬ್‌ಸೈಟ್ http://www.koppal.nic.in   ರಲ್ಲಿ ಪ್ರಕಟಿಸಲಾಗಿದೆ. ಅರ್ಹತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆಯು ಜೂನ್ 21 ರಂದು ಬೆಳಿಗ್ಗೆ 10 ಗಂಟೆಯಿAದ ಸಾಯಂಕಾಲ 05.30 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಆಡಿಟೋರಿಯಂ ಹಾಲ್, ಜಿಲ್ಲಾಡಳಿತ ಭವನ, ಕೊಪ್ಪಳದಲ್ಲಿ ನಡೆಯಲಿದೆ.


ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿದ ಸಂಬAಧಪಟ್ಟ ಮೂಲ ಹಾಗೂ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಒಂದು ಸೆಟ್ ದಾಖಲಾತಿಗಳೊಂದಿಗೆ ಪರಿಶೀಲನೆಗೆ ಖುದ್ದಾಗಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology