Home » ಲೈವ್ ನ್ಯೂಸ್ » ಜೂ.17 ರಂದು ಉದ್ಯಮಶೀಲತಾ ತರಬೇತಿ ಕಾರ್ಯಾಗಾರ

ಜೂ.17 ರಂದು ಉದ್ಯಮಶೀಲತಾ ತರಬೇತಿ ಕಾರ್ಯಾಗಾರ

ಕೊಪ್ಪಳ.18.ಜೂನ್.25:-  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜನ್ ಕರ್ನಾಟಕ ಫೌಂಡೇಶನ್, ಸಿಡಾಕ್ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜೂನ್ 17 ರಂದು ಮಧ್ಯಾಹ್ನ 03 ಗಂಟೆಗೆ ಗೂಗಲ್ ಮೀಟ್ ಮೂಲಕ ಉದ್ಯಮ ಶೀಲತಾ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.


ಜಿಲ್ಲೆಯ ಯುವಕ/ಯುವತಿಯರು, ಉದ್ಯಮ ಆಸಕ್ತರು ಲಿಂಕ್:  https://meet.google.com/ytu-pmaq-nqa     ಮೂಲಕ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಕಾರ್ಯಾಗಾರದಲ್ಲಿ ಜಿಲ್ಲೆಗೆ ಸೂಕ್ತವಾದ ಉದ್ಯಮಗಳ ಆಯ್ಕೆ, ಬ್ಯಾಂಕ್‌ಗಳ ಸಾಲ ಸೌಲಭ್ಯ, ಉದ್ಯಮ ಪ್ರಾರಂಭಕ್ಕೆ ಯಂತ್ರಗಳ ಆಯ್ಕೆ, ಸರ್ಕಾರದಿಂದ ನೀಡಲಾಗುವ ಸಾಲ/ಸಹಾಯಧನಗಳು ಮುಂತಾದವುಗಳ ಕುರಿತು ಮಾಹಿತಿ ನೀಡಲಾಗುತ್ತದೆ.


2ನೇ ಹಂತದಲ್ಲಿ ಜೂನ್ 24 ರಂದು ನಗರದ ಸಾಹಿತ್ಯ ಭವನದಲ್ಲಿ ಒಂದು ದಿನದ ಉದ್ಯಮಶೀಲತಾ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಗೂಗಲ್‌ಮೀಟ್‌ನಲ್ಲಿ ನೀಡಲಾಗುವ ಮಾಹಿತಿ ಕುರಿತು ಫಲಾನುಭವಿಗಳೊಂದಿಗೆ ನೇರವಾಗಿ ಸಂವಾದ ನಡೆಸಬಹುದು. ಕಾರ್ಯಾಗಾರ ಸಂಪೂರ್ಣ ಉಚಿತವಾಗಿದ್ದು, ಬೇರೆ ಜಿಲ್ಲೆಯವರು ಕೂಡ ಭಾಗವಹಿಸಲು ಅವಕಾಶವಿರುತ್ತದೆ. ನುರಿತ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ನೀಡಲಾಗುತ್ತದೆ.


ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ: 08539-230121, ಶಿಲ್ಪಾ ಹಳ್ಳಿಕೇರಿ, ಮೊ.ಸಂ: 9379549304 ಗೆ ಸಂಪರ್ಕಿಸಬಹುದು ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology