Home » ಲೈವ್ ನ್ಯೂಸ್ » ಜಿಲ್ಲಾ ಕಾಂಗ್ರೆಸ್ ಕಮಿಟಿಯ ಪರಿಶಿಷ್ಟ ಪಂಗಡ ವಿಭಾಗಕೆ ನಾರಾಯಣ ತುಕಾರಾಮ ಹರಿಪೂಜೆ ನೇಮಕ.

ಜಿಲ್ಲಾ ಕಾಂಗ್ರೆಸ್ ಕಮಿಟಿಯ ಪರಿಶಿಷ್ಟ ಪಂಗಡ ವಿಭಾಗಕೆ ನಾರಾಯಣ ತುಕಾರಾಮ ಹರಿಪೂಜೆ ನೇಮಕ.

ಬೀದರ.05.ಸೆಪ್ಟೆಂಬರ್.25:- ತಾಲೂಕಿನ ಚಿಲ್ಲರ್ಗಿ ಗ್ರಾಮದ ಯುವ ಮುಖಂಡ ನಾರಾಯಣ ತುಕಾರಾಮ ಹರಿಪೂಜೆ ಅವರನ್ನು ಜಿಲ್ಲಾ ಕಾಂಗ್ರೆಸ್ ಕಮಿಟಿಯ ಪರಿಶಿಷ್ಟ ಪಂಗಡ ವಿಭಾಗದ ಬೀದರ್ ಉತ್ತರ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಅಧ್ಯಕ್ಷರಾದ ವಿಜಯ ನಾಯಕ ಎಂ ಹಾಗೂ ಸಚಿವರಾದ ರಹಿಂ ಖಾನ್ ಇವರ ಒಪ್ಪಿಗೆಯಂತೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ತುಕಾರಾಮ ಎಂ ಚಿದ್ರಿ ಸಮ್ಮುಖದಲ್ಲಿ ಹಾಗೂ ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ಪಂಗಡ ವಿಭಾಗದ) ಅಧ್ಯಕ್ಷರಾದ ರಾಕೇಶ್ ಎನ್. ಕುರುಬಖೇಖಗಿ ಅವರುಗಳ ಅನುಮೋದನೆ ಅನ್ವಯ ಈ ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮತ್ತು ಶಿಸ್ತಿಗೆ ಒಳಪಟ್ಟು ಕೆಲಸ ಮಾಡಲು ಸೂಚಿಸಲಾಗಿದೆ ಎಂದು ತುಕಾರಾಮ ಎಂ ಚಿದ್ರಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology