Home » ಲೈವ್ ನ್ಯೂಸ್ » ಚಾಲಕರ ಹೊರಗುತ್ತಿಗೆ ನೇಮಕಕ್ಕೆ ವಾಕ್-ಇನ್-ಇಂಟರವ್ಯೂವ್ ಫೆ.3 ರಿಂದ 4 ರವರೆಗೆ

ಚಾಲಕರ ಹೊರಗುತ್ತಿಗೆ ನೇಮಕಕ್ಕೆ ವಾಕ್-ಇನ್-ಇಂಟರವ್ಯೂವ್ ಫೆ.3 ರಿಂದ 4 ರವರೆಗೆ

ಬೀದರ.25.ಜನವರಿ.26:- ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೊದ್ದೋಶ ಸಹಕಾರ ಸಂಘದ ಮೂಲಕ ಹೊರಗುತ್ತಿಗೆ ಮೇಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೀದರ ವಿಭಾಗದ ವ್ಯಾಪ್ತಿಯ ಬೀದರ-1, ಬೀದರ-2, ಭಾಲ್ಕಿ, ಔರಾದ, ಬಸವಕಲ್ಯಾಣ ಮತ್ತು ಹುಮನಾಬಾದ ಘಟಕಗಳ ಬಸ್ ಚಾಲನೆಗೆ 78 ಜನ ಚಾಲಕರು ಬೇಕಾಗಿರುವುದರಿಂದ ವಾಕ್-ಇನ್-ಇಂಟರವ್ಯೂವ್ ಏರ್ಪಡಿಸಲಾಗಿರುತ್ತದೆ.

ಕಾರಣ ದಿನಾಂಕ: 03-02-2026 ರಿಂದ 04-02-2026 ರವರೆಗೆ ಚಾಲಕ ಹುದ್ದೆಗೆ ಕಕರಸಾ ನಿಗಮದ ಹಳೆ ಬಸ್ ನಿಲ್ದಾಣದ ಬೀದರ ವಿಭಾಗೀಯ ಕಛೇರಿಯ ಸಮಯದಲ್ಲಿ ನೇರ ಸಂದರ್ಶನ ನಡೆಸಲಾಗುತ್ತಿದೆ.

ಆಯ್ಕೆ ಸಮಿತಿ ಸಮ್ಮುಖದಲ್ಲಿ ಸಂದರ್ಶನಕ್ಕೆ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು, ಅಭ್ಯರ್ಥಿಗಳು ಹಾಜರುಪಡಿಸಬೇಕಾದ ದಾಖಲಾತಿಗಳು ಮತ್ತು ಅನುಸರಿಸಬೇಕಾದ ಷರತ್ತು ನಿಬಂಧನೆಗಳ ಹಾಗೂ ಹೆಚ್ಚಿನ ವಿವರಗಳಿಗಾಗಿ ಸರಕಾರದ ವೆಬ್‍ಸೈಟ್ www.bidar.nic.in   ನ್ನು ಸಂಪರ್ಕಿಸಬಹುದಾಗಿದೆ ಎಂದು ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology