Home » ಲೈವ್ ನ್ಯೂಸ್ » ಗಂಗಾವತಿ: ನೂತನ ನ್ಯಾಯಾಲಯದಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳ ಪೂರೈಕೆಗೆ ಅರ್ಜಿ ಆಹ್ವಾನ

ಗಂಗಾವತಿ: ನೂತನ ನ್ಯಾಯಾಲಯದಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳ ಪೂರೈಕೆಗೆ ಅರ್ಜಿ ಆಹ್ವಾನ

ಕೊಪ್ಪಳ.05.ಜೂನ್.26: ಕೊಪ್ಪಳ ಜಿಲ್ಲೆಯ ಗಂಗಾವತಿಯ ನೂತನ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಲು ಹೊರಗುತ್ತಿಗೆ ಆಧಾರದ ಮೇಲೆ ಟೈಪಿಸ್ಟ್, ಅಟೆಂಡರ್ ಮತ್ತು ಜವಾನರನ್ನು ಪೂರೈಸಲು ನೋಂದಾಯಿತ ಅರ್ಹ ಸಂಸ್ಥೆಗಳಿಂದ ಇ-ಟೆಂಡರ್ ಕೆಪಿಪಿಪಿ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ಜೂನ್ 10ರ ಸಂಜೆ 4 ಗಂಟೆ ಆಗಿದ್ದು, ಅರ್ಹ ಸಂಸ್ಥೆಗಳು ತಮ್ಮ ಅರ್ಜಿಯನ್ನು ಕೆಪಿಪಿಪಿ ಪೋರ್ಟಲ್ ವೆಬ್‌ಸೈಟ್ https://kppp.karnataka.gov.in ಟೆಂಡರ್ ರೆಫರೆನ್ಸ ನಂ: HCK/2026-27/SEO167 ಮೂಲಕ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.


ಹೆಚ್ಚಿನ ಮಾಹಿತಿಗಾಗಿ ಮುಖ್ಯ ಆಡಳಿತ ಅಧಿಕಾರಿಗಳು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊಪ್ಪಳ ಇವರನ್ನು ಕಾರ್ಯಾಲಯದ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.

Author

ಪ್ರಮುಖ ಸುದ್ದಿ

Stock market

Astrology