Home » ಲೈವ್ ನ್ಯೂಸ್ » ಕೇಂದ್ರ ರೈಲ್ವೆ ಸಚಿವರಿಗೆ ಭೇಟಿ ಮಾಡಿದ
ಡಾ.ಶರಣಪ್ರಕಾಶ ಪಾಟೀಲ: ರೈಲ್ವೆ ನಿಲುಗಡೆಗೆ ಮನವಿ

ಕೇಂದ್ರ ರೈಲ್ವೆ ಸಚಿವರಿಗೆ ಭೇಟಿ ಮಾಡಿದ
ಡಾ.ಶರಣಪ್ರಕಾಶ ಪಾಟೀಲ: ರೈಲ್ವೆ ನಿಲುಗಡೆಗೆ ಮನವಿ

ರಾಯಚೂರು.01.ಆಗಸ್ಟ್.25: ವೈದ್ಯಕೀಯ ಶಿಕ್ಷಣ ಹಾಗೂ ರಾಯಚೂರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು ನವದೆಹಲಿಗೆ ತೆರಳಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರನ್ನು ಶುಕ್ರವಾರ ಭೇಟಿ ಮಾಡಿದರು.


ಸೇಡಂ ಮಾರ್ಗವಾಗಿ ತೆರಳುವ ರೈಲುಗಳನ್ನು ಮಳಖೇಡ ರೋಡ್ (ಸ್ಟೇಷನ್) ಹಾಗೂ ಕುರುಕುಂಟಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಳಿಸಬೇಕು. ಸೇಡಂ ತಾಲೂಕಿನ ಅತಿದೊಡ್ಡ ಪಂಚಾಯತ್ ಹೊಂದಿರುವ ಮಳಖೇಡ ರೋಡ್ ರೈಲ್ವೆ ನಿಲ್ದಾಣದಲ್ಲಿ ಹಾಗೂ ಕುರುಕುಂಟಾ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಕೇಂದ್ರ ಸಚಿವರಾದ ವಿ.ಸೋಮಣ್ಣ ಅವರಲ್ಲಿ ಮನವಿ ಮಾಡಿದರು.


ರೈಲು ನಿಲುಗಡೆ ಕುರಿತಂತೆ ಮನವಿ ಸಲ್ಲಿಸಿದ ನಂತರ ಡಾ.ಶರಣಪ್ರಕಾಶ ಪಾಟೀಲ ಅವರು ಕೇಂದ್ರ ಸಚಿವರೊಂದಿಗೆ ಉಭಯ ಕುಶಲೋಪರಿ ನಡೆಸಿದರು.

Author

ಪ್ರಮುಖ ಸುದ್ದಿ

Stock market

Astrology