Home » ಲೈವ್ ನ್ಯೂಸ್ » ‘ಕಾಲೇಜು ಶಿಕ್ಷಣ ಇಲಾಖೆ’ ugc ಮತ್ತು NAAC ಪತ್ರ ವ್ಯವಹಾರ ಕನ್ನಡದಲ್ಲೇ,

‘ಕಾಲೇಜು ಶಿಕ್ಷಣ ಇಲಾಖೆ’ ugc ಮತ್ತು NAAC ಪತ್ರ ವ್ಯವಹಾರ ಕನ್ನಡದಲ್ಲೇ,

ಬೆಂಗಳೂರು.31.ಡಿಸೆಂಬರ್.25: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಖಾಸಗಿ ಅನುದಾನಿತ ಹಾಗೂ ಬಿ.ಎಡ್. ಕಾಲೇಜುಗಳಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ವಿದ್ಯಾಸಂಸ್ಥೆಯ ಶೈಕ್ಷಣಿಕ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ಈ ಸಂಸ್ಥೆಯು ಮೌಲ್ಯಮಾಪನ ಮಾಡಿ, ಶ್ರೇಣಿ ನೀಡುವ ಹಿನ್ನೆಲೆಯಲ್ಲಿ ನ್ಯಾಕ್ ಸಂಸ್ಥೆಯೊಂದಿಗೆ ನಡೆಸುವ ಕಾಲೇಜಿನ ಬಹುತೇಕ ಎಲ್ಲ ಪತ್ರ ವ್ಯವಹಾರಗಳನ್ನು ಅಂಗ್ಲಭಾಷೆಯಲ್ಲಿಯೇ ಸಲ್ಲಿಸಲಾಗುತ್ತಿದೆ.

ಆದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಮತ್ತು ಆಡಳಿತ ಭಾಷೆಯಾಗಿರುವುದರಿಂದ, ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಖಾಸಗಿ ಅನುದಾನಿತ ಹಾಗೂ ಬಿ.ಎಡ್. ಕಾಲೇಜುಗಳಲ್ಲಿ ನ್ಯಾಕ್‌ ಗೆ ಸಂಬಂಧಿಸಿದಂತೆ ನಡೆಸುವ ದೈನಂದಿನ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿಯೇ ನಡೆಸಬೇಕಿರುತ್ತದೆ.

ಉಲ್ಲೇಖಿತ ಪತ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿರುವಂತೆ ಇನ್ನು ಮುಂದೆ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಖಾಸಗಿ ಅನುದಾನಿತ ಹಾಗೂ ಬಿ.ಎಡ್. ಕಾಲೇಜುಗಳಲ್ಲಿ ನ್ಯಾಕ್‌ ಸಂಬಂಧಿಸಿದಂತೆ ನಡೆಸುವ ದೈನಂದಿನ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿಯೇ ನಡೆಸುವಂತೆ ಹಾಗೂ ನ್ಯಾಕ್‌ನ ವಿವಿಧ ಹಂತಗಳಲ್ಲಿ ನ್ಯಾಕ್ ಸಂಸ್ಥೆಯು ವಿಶೇಷವಾಗಿ ಯಾವುದಾದರೂ ದಾಖಲಾತಿಗಳನ್ನು ಆಂಗ್ಲಭಾಷೆಯಲ್ಲಿ ಕೇಳಿದಲ್ಲಿ ಆ ದಾಖಲಾತಿಗಳನ್ನು ಕನ್ನಡದಿಂದ ತರ್ಜುಮೆ ಮಾಡಿ, ಸಲ್ಲಿಸುವಂತೆ ಈ ಮೂಲಕ ಸೂಚಿಸಲಾಗಿದೆ.

Author

ಪ್ರಮುಖ ಸುದ್ದಿ

Stock market

Astrology